
ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆಯಾಗಿರುವ ಘಟನೆ ತಾಲೂಕಿನ ಗರಿಕೇನಹಳ್ಳಿ ಸಮೀಪ ಇಂದು ಮಧ್ಯಾಹ್ನ ನಡೆದಿದೆ.
ಮೃತಳ ಕಾಲು, ಬೆನ್ನು, ಸೊಂಟದ ಭಾಗ, ಕ್ಕೆಗಳಲ್ಲಿ ಗಾಯದ ಗುರುತುಗಳು ಕಂಡುಬಂದಿರುವುದರಿಂದ ಯಾರೋ ಕೊಲೆ ಮಾಡಿ ಮರಕ್ಕೆ ನೇಣು ಹಾಕಿರಬಹುದು ಎಂದು ಮೃತಳ ಕುಟುಂಬಸ್ಥರು ಕೊಲೆ ಆರೋಪವನ್ನ ಮಾಡಿದ್ದಾರೆ.
ಗಂಗರತ್ನಮ್ಮ(44) ಮೃತ ದುರ್ದೈವಿ.
ನಿನ್ನೆ ನಾಪತ್ತೆಯಾಗಿದ್ದ ಮಹಿಳೆ ಇಂದು ಗ್ರಾಮದ ಹೊರ ಭಾಗದಲ್ಲಿ ನೇಣು ಬೀಗಿದ ಸ್ಥಿತಿಯಲ್ಲಿ ಆಕೆಯ ಶವ ಪತ್ತೆಯಾಗಿದೆ.
ಸ್ಥಳಕ್ಕೆ ಹೊಸಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಮೃತ ಮಹಿಳೆಯ ಕುಟುಂಬ ಜಮೀನು ಮಾರಾಟ ಮಾಡಿದ್ದರು, ಜಮೀನು ಮಾರಾಟದ ಹಣ ಮನೆಯಲ್ಲಿತ್ತು, ಇದೇ ಕಾರಣಕ್ಕೆ ಕೊಲೆ ಮಾಡಿರುವ ಸಾಧ್ಯತೆ ಇದೆ ಎಂದು ಮೃತಳ ಕುಟುಂಬಸ್ಥರು ಕೊಲೆ ಆರೋಪವನ್ನ ಮಾಡಿದ್ದಾರೆ.