ಸುಜುಕಿ ಕ್ಯಾರಿ ವ್ಯಾನ್ ಚಾಲಕನ ನಿಯಂತ್ರಣ ತಪ್ಪಿ ಹೈವೆ ರಸ್ತೆಯಿಂದ ಡಿವೈಡರ್ ದಾಟಿ ಸರ್ವೀಸ್ ರಸ್ತೆಗೆ ಬಂದು ಬಿದ್ದಿದೆ. ಘಟನೆ ಮೇಷ್ಟ್ರಮನೆ ಕ್ರಾಸ್ ಬಳಿ ನಡೆದಿದೆ. ವಾಹನ ಪಲ್ಟಿ ಹೊಡೆದ ಹಿನ್ನೆಲೆ ಚಾಲಕನಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ರವಾನಿಸಲಾಗಿದೆ.
ಫ್ಯಾಕ್ಟರಿ ಸರಕನ್ನು ಏಪೋರ್ಟ್ನಿಂದ ತುಮಕೂರಿಗೆ ದಾಬಸ್ ಪೇಟೆ- ಹೊಸಕೋಟೆ ಹೆದ್ದಾರಿಯಲ್ಲಿ ಸಾಗಿಸುವ ವೇಳೆ ಕೊಡಿಗೇಹಳ್ಳಿ ಮೇಲ್ಸೇತುವೆ ಇಳಿದು ಬರುವ ವೇಳೆ ಚಾಲಕನ ನಿಯಂತ್ರಣ ತಪ್ಪಿ ಹೈವೆ ರಸ್ತೆಯಿಂದ ಸರ್ವೀಸ್ ರಸ್ತೆಗೆ ಬಂದು ಪಲ್ಟಿ ಹೊಡೆದಿದೆ.
ಸಂತೋಷ್, ಗಾಯಗೊಂಡ ಚಾಲಕ.
ಅದೃಷ್ಟವಶಾತ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದು, ಗೂಡ್ಸ್ ವಾಹನ ಜಖಂಗೊಂಡಿದೆ.
ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.