2023-ಕರ್ನಾಟಕ ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಸಂಬಂಧ ನಾಮಪತ್ರ ಹಿಂಪಡೆಯುವ ದಿನವಾದ ಇಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಿಂದ ಒಟ್ಟು 05 ಅಭ್ಯರ್ಥಿಗಳು ನಾಮಪತ್ರಗಳನ್ನು ಹಿಂಪಡೆದಿದ್ದು, ಚುನಾವಣೆಯ ಅಂತಿಮ ಕಣದಲ್ಲಿ ಒಟ್ಟು 56 ಅಭ್ಯರ್ಥಿಗಳಿದ್ದಾರೆ.
178-ಹೊಸಕೋಟೆ ವಿಧಾನಸಭಾ ಕ್ಷೇತ್ರದ ಚುನಾವಣೆಯ ಅಂತಿಮ ಕಣದಲ್ಲಿ 23 ಅಭ್ಯರ್ಥಿಗಳು ಉಳಿದಿದ್ದು, ಒಬ್ಬ ಅಭ್ಯರ್ಥಿಯು ನಾಮಪತ್ರ ಹಿಂಪಡೆದಿದ್ದಾರೆ.
179-ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಚುನಾವಣೆಯ ಅಂತಿಮ ಕಣದಲ್ಲಿ 11 ಅಭ್ಯರ್ಥಿಗಳು ಉಳಿದಿದ್ದು, ಇಬ್ಬರು ಅಭ್ಯರ್ಥಿಗಳು ನಾಮಪತ್ರ ಹಿಂಪಡೆದಿದ್ದಾರೆ.
180-ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ ಚುನಾವಣೆಯ ಅಂತಿಮ ಕಣದಲ್ಲಿ 12 ಅಭ್ಯರ್ಥಿಗಳು ಉಳಿದಿದ್ದು, ಒಬ್ಬ ಅಭ್ಯರ್ಥಿಯು ನಾಮಪತ್ರ ಹಿಂಪಡೆದಿದ್ದಾರೆ.
181-ನೆಲಮಂಗಲ ವಿಧಾನಸಭಾ ಕ್ಷೇತ್ರದ ಚುನಾವಣೆಯ ಅಂತಿಮ ಕಣದಲ್ಲಿ 10 ಅಭ್ಯರ್ಥಿಗಳು ಉಳಿದಿದ್ದು, ಒಬ್ಬ ಅಭ್ಯರ್ಥಿಯು ನಾಮಪತ್ರ ಹಿಂಪಡೆದಿದ್ದಾರೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಆರ್.ಲತಾ ಅವರು ತಿಳಿಸಿದ್ದಾರೆ.
ನಾಮಪತ್ರ ಹಿಂಪಡೆದ ಅಭ್ಯರ್ಥಿಗಳ ವಿವರ
ಹೊಸಕೋಟೆ ವಿಧಾನಸಭಾ ಕ್ಷೇತ್ರ
1. ನವೀನ.ಕೆ (ಸ್ವತಂತ್ರ ಅಭ್ಯರ್ಥಿ)
ದೇವನಹಳ್ಳಿ ವಿಧಾನಸಭಾ ಕ್ಷೇತ್ರ
1. ಡಾ.ಎಂ.ವೆಂಕಟ ಸ್ವಾಮಿ (ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ)
2. ಮುನಿಯಪ್ಪ.ಕೆ (ಸ್ವತಂತ್ರ ಅಭ್ಯರ್ಥಿ)
ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರ
1. ಇಬ್ರಾಹಿಂ ಷರೀಫ್ ತೂಬಗೆರೆ ಷರೀಫ್ (ಸ್ವತಂತ್ರ ಅಭ್ಯರ್ಥಿ)
ನೆಲಮಂಗಲ ವಿಧಾನಸಭಾ ಕ್ಷೇತ್ರ
1. ಅರುಣ್ ಕುಮಾರ್.ಬಿ.ಎನ್ (ಸ್ವತಂತ್ರ ಅಭ್ಯರ್ಥಿ)