ಕೋಲಾರ: ಆಗ್ನೇಯ ಪದವೀಧರ ಕ್ಷೇತ್ರದ ಜೆಡಿಯು ಪಕ್ಷದ ಅಭ್ಯರ್ಥಿ ತಾಲೂಕಿನ ಕಲ್ಲಂಡೂರು ಗ್ರಾಮದ ಡಾ.ಕೆ ನಾಗರಾಜ್ ಅವರು ಪಕ್ಷದ ರಾಜ್ಯ ಅಧ್ಯಕ್ಷ ಹಾಗೂ ಮಾಜಿ ಶಾಸಕ ಮಹಿಮ ಪಟೇಲ್ ರವರ ನೇತೃತ್ವದಲ್ಲಿ ತುಮಕೂರು ಸಿದ್ದಗಂಗಾ ಮಠದ ಪೀಠಾಧಿಪತಿ ಶ್ರೀ ಡಾ. ಸಿದ್ದಲಿಂಗ ಸ್ವಾಮಿಗಳ ಆಶೀರ್ವಾದ ಪಡೆದರು.
ಆಶೀರ್ವಾದ ಮಾಡಿ ಮಾತನಾಡಿದ ಸ್ವಾಮಿಗಳು ಪ್ರಸ್ತುತ ಸಂದರ್ಭದಲ್ಲಿ ನಾಡಿಗೆ ಮಹಿಮ ಪಟೇಲ್ ಅವರಂತಹ ನಾಯಕರ ಅವಶ್ಯಕತೆ ತುಂಬಾ ಇದೆ, ಇವರ ಸರ್ವೋದಯ ಸಿದ್ಧಾಂತ ಜನರಿಗೆ ಬಹುಬೇಗ ಮನಮುಟ್ಟಲಿ ಹಾಗೂ ಡಾ ನಾಗರಾಜ್ ರವರಿಗೆ ಜಯಸಿಗಲಿ ಎಂದು ಆಶೀರ್ವಾದ ಮಾಡಿದರು.
ಈ ಸಂದರ್ಭದಲ್ಲಿ ಜೆಡಿಯು ಪಕ್ಷದ ಪ್ರಧಾನ ಕಾರ್ಯದರ್ಶಿಗಳಾದ ಚಂದ್ರಶೇಖರ್ ಗಂಗೂರ್, ಸುರೇಶ್ ತುಮಕೂರು, ರಂಗನಾಥ್ ಕೆ ಆರ್, ರಾಜ್ಯ ರೈತ ಘಟಕದ ಅಧ್ಯಕ್ಷ ಶ್ರೀನಿವಾಸಗೌಡ, ರಾಜ್ಯ ಮಹಿಳಾ ಸಂಚಾಲಕಿ ಕಲಾವತಿ, ಯಶೋದಾ ತುಮಕೂರು ಪ್ರಕಾಶ್ ಮಹಡಿಕ್, ಉಪಾಧ್ಯಕ್ಷೆ ಶಾಂತಕುಮಾರಿ, ಯುವ ಜನತಾದಳ ಉಪಾಧ್ಯಕ್ಷ ಪ್ರಭು, ಮೈನಾವತಿ, ದೀಪಕ್, ಕೋಲಾರದ ನಾರಾಯಣಸ್ವಾಮಿಗೌಡ , ಅಂಬರೀಷ್, ಚಿತ್ರದುರ್ಗದ ಸುನಿಲ್, ತುಮಕೂರಿನ ವಿಶ್ವನಾಥ್ ಗೌಡ ಡಾ.ಲೋಹಿತ್ ಗೌಡ, ದಾವಣಗೆರೆ ಜಿಲ್ಲಾಧ್ಯಕ್ಷ ನೀಲಗಿರಿಯಪ್ಪ, ಮಲ್ಲಿಕ್ ಮುಂತಾದವರು ಇದ್ದರು.