
ವಿರಾಜಪೇಟೆ ನ್ಯಾಯಾಲಯದ ಮುಂದೆ ಅಳಿಯನ ಮೇಲೆ ಮಾವ ಹಲ್ಲೆ ನಡೆಸಿದ ಘಟನೆ ಇಂದು ಮಧ್ಯಾಹ್ನ ನಡೆಡಿದೆ.
ಗಾಯಾಳು ರಂಜಿತ್ (35) ವಿರಾಜಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಳೆದ ಎರಡು ವರ್ಷಗಳಿಂದ ಮಗಳ ಮತ್ತು ಅಳಿಯನ ನಡುವೆ ವಿರಾಜಪೇಟೆ ನ್ಯಾಯಾಲಯದ ಪತಿ ಪತ್ನಿ ನಡುವೆ ವಿವಾಹ ವಿಚ್ಛೇದನೆ ವಿಚಾರಣೆ ನಡೆಯುತ್ತಿತ್ತು.
ನ್ಯಾಯಾಲಯದ ಮುಂದೆ ಮಾವ ವಿರಾಜಪೇಟೆ ಮಾಜಿ ಪಟ್ಟಣ ಪಂಚಾಯತಿ ಸದಸ್ಯರಾದ ಚಂದ್ರಶೇಖರ ಅವರು ಅಳಿಯ ಗೋಣಿಕೊಪ್ಪ ನಿವಾಸಿ ರಂಜಿತ್ ಮೇಲೆ ಹಲ್ಲೆ ನಡೆಸಿದ್ದು, ರಕ್ತ ಕಣಗಳು ಹರಿಸಿಕೊಂಡು ನ್ಯಾಯಧೀಶರ ಮುಂದೆ ಓಡಿ ಹೋಗಿ ಘಟನೆ ಬಗ್ಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ರಂಜಿತ್ ಗೆ ತಕ್ಷಣ ಚಿಕಿತ್ಸೆ ನೀಡುವಂತೆ ಮತ್ತು ಹಲ್ಲೆ ನಡೆಸಿದ ಚಂದ್ರಶೇಖರನ ಮೇಲೆ ಮೊಕದ್ದಮೆ ಹೂಡುವಂತೆ ವಿರಾಜಪೇಟೆ ನ್ಯಾಯಾಲಯದ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ವಿರಾಜಪೇಟೆ ನಗರ ಠಾಣೆಯಲ್ಲಿ ಚಂದ್ರಶೇಖರನ ವಿರುದ್ಧ ಮೊಕದ್ದಮೆ ದಾಖಲಾಗಿದೆ.