ಬೇಸಿಗೆ ಪ್ರಾರಂಭ: ನೀರಿಗೆ ಸಮಸ್ಯೆಯಾಗದಂತೆ ಕ್ರಮ ವಹಿಸಲು ಅಧಿಕಾರಿಗಳಿಗೆ ಶಾಸಕ ಕೊತ್ತೂರು ಮಂಜುನಾಥ್ ಸೂಚನೆ

ಕೋಲಾರ: ನಗರಸಭೆ ವ್ಯಾಪ್ತಿಯಲ್ಲಿ ಎಲ್ಲಾ ವಾರ್ಡ್ ಗಳಿಗೆ ಯರಗೋಳ್ ನೀರು ಹೋಗುವಂತೆ ಮಾಡಿ ನೀರಿಗೆ‌ ಕೊರತೆ‌ ಇಲ್ಲ ಆದರೆ ಈಗ ಎಂಟು ಗಂಟೆಗಳು ಮಾತ್ರವೇ ಮೋಟಾರ್ ರನ್ ಮಾಡಿದ್ದು ಇನ್ನೂ ಹೆಚ್ಚಿನ ಸಮಯ ವಿಸ್ತರಣೆ ಮಾಡಿ ನೀರು ಕೊಡುವ ಕೆಲಸವನ್ನು ಮಾಡಿ ಎಂದು ಅಧಿಕಾರಿಗಳಿಗೆ ಶಾಸಕ ಕೊತ್ತೂರು ಮಂಜುನಾಥ್ ಸೂಚನೆ ನೀಡಿದರು.

ಕೋಲಾರ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಈಗಾಗಲೇ ಬೇಸಿಗೆ ಕಾಲ ಪ್ರಾರಂಭವಾಗಿದೆ ನೀರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಯರಗೋಳ್ ನೀರು ಜೊತೆಗೆ ನಗರಸಭೆ ವ್ಯಾಪ್ತಿಯಲ್ಲಿನ ಕೊಳವೆ ಬಾವಿಗಳಲ್ಲಿ ಮೋಟಾರ್ ಪಂಪ್ ರಿಪೇರಿ ಮಾಡಿಸಬೇಕು ನೀರಿನ ಅಭಾವ ಇರುವ ಕಡೆ ನಗರಸಭೆ ಸದಸ್ಯರು, ಅಧಿಕಾರಿಗಳು, ವಾಟರ್ ಮೆನ್ ಕರೆದುಕೊಂಡು ವಾರ್ಡ್ ಗೆ ಹೋಗಿ‌ ಪರಿಶೀಲಿಸಬೇಕು ಎಂದು ತಿಳಿಸಿದರು.

ನಗರಸಭೆ ವ್ಯಾಪ್ತಿಯಲ್ಲಿ ನಡೆಯುವ ಅಭಿವೃದ್ಧಿಗೆ ಸಂಬಂಧಿಸಿದದ್ದನ್ನು ಸಂಬಂಧಪಟ್ಟವರು ನೇರವಾಗಿ ಪರಿಶೀಲನೆ ನಡೆಸಿ ಕಾಮಗಾರಿ ಪೂರ್ಣವಾಗಿದ್ದರೆ ಮಾತ್ರ ನಗರಸಭೆ ಅಧೀನಕ್ಕೆ ಪಡೆದುಕೊಳ್ಳಿ ಗುತ್ತಿಗೆದಾರರು ಅಷ್ಟೇ ಪೂರ್ಣವಾದರೆ ಮಾತ್ರವೇ ಹಸ್ತಾಂತರ ಮಾಡಬೇಕು ಏನಾದರೂ ತೊಂದರೆಗಳು ಇದ್ದರೆ ನಮ್ಮ ಗಮನಕ್ಕೆ ತಂದರೆ ಮೇಲಾಧಿಕಾರಿಗಳ ಜೊತೆ ಮಾತನಾಡಿ ಕೆಲಸ ಮಾಡಿಸಬಹುದು ಜೊತೆಗೆ ಉಸ್ತುವಾರಿ ಸಚಿವರ ಜೊತೆ ಮಾತನಾಡುತ್ತೇನೆ ಎಂದರು

ಸಂಸದ ಎಂ.ಮಲ್ಲೇಶ್ ಬಾಬು ಮಾತನಾಡಿ ನಗರದಲ್ಲಿ ಪಾದಚಾರಿ ಮಾರ್ಗವು ಒತ್ತುವರಿಯಾಗಿದೆ ಇದರ ಬಗ್ಗೆ ಸಾಕಷ್ಟು ದೂರುಗಳು ಬಂದಿವೆ ಪೊಲೀಸರು, ನಗರಸಭೆ ಸದಸ್ಯರು ಹಾಗೂ ನಗರಸಭೆ ಅಧಿಕಾರಿಗಳು ಸೇರಿ‌ ಪಾದಚಾರಿ ಒತ್ತುವರಿ ತೆರವು ಮಾಡಬೇಕು ಪಾದಚಾರಿ ಮಾರ್ಗ ಇರುವುದು ‌ಪಾದಚಾರಿಗಳು ನಡೆದಾಡಲು. ಬೀದಿಬದಿ ಮಾರಾಟಗಾರರಿಗೆ ಪ್ರತ್ಯೇಕವಾದ ವ್ಯವಸ್ಥೆ ಮಾಡಲಾಗುತ್ತದೆ ಜೊತೆಗೆ ಸ್ವಚ್ಚತಾ ಬಗ್ಗೆ ಗಮನ ಕೊಡಬೇಡಿ. ೨ ಕೋಟೆ ಅನುದಾನದಲ್ಲಿ ಬರಿ ವಾಹನ ಖರೀದಿಸಿದ್ದಾರೆ ಅವು ಸಮರ್ಪಕವಾಗಿ ಬಳಕೆಯಾಗಬೇಕು ಎಂದರು.

ನಗರಸಭೆ ಸದಸ್ಯರು ಮಾತನಾಡಿ ನಗರದ ಹಲವು ವಾರ್ಡ್ ಗಳಿಗೆ ಯರಗೋಳ್ ನೀರು ಬರುತ್ತಿಲ್ಲ ಕೆಲವೆಡೆ ಕಡಿಮೆ ನೀರು ಬರುತ್ತದೆ ಒಳಚರಂಡಿ ಮಂಡಳಿ ಬಳಿಯೂ ಆದಾಯ ಇಲ್ಲ ಯರಗೋಳ್ ಗುತ್ತಿಗೆದಾರರ ನಿರ್ವಹಣೆ ಅವಧಿ‌ ಮುಗಿದು ಹೋಗಿದೆ ಸರ್ಕಾರವೇ ನಿರ್ವಹಣೆ ಮಾಡಬೇಕು. ಈ ಬಗ್ಗೆ ಸಚಿವರ ಜೊತೆ ಮಾತನಾಡಬೇಕು ಎಂದು ಸಭೆಯಲ್ಲಿ ಒತ್ತಾಯಿಸಿದರು.

ಕೋಲಾರ ನಗರದ ಒಳಾಂಗಣ ಕ್ರೀಡಾಂಗಣಕ್ಕೆ ಹೆಸರಿಡಬೇಕಾಗಿದೆ ರಾಜ್ಯದ ಪ್ರಥಮ ಮುಖ್ಯಮಂತ್ರಿ ಮಾಜಿ ಕೆ.ಸಿ.ರೆಡ್ಡಿ ಸಾಹಿತಿ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಸೇರಿದಂತೆ ರಾಜಮಾತೆ ಹಾಗೂ ಮಾಜಿ ಐಎಎಸ್ ಅಧಿಕಾರಿ‌‌ ದಿವಂಗತ ಸಿ.ಮುನಿಸ್ವಾಮಿ ಹೆಸರು ಸರ್ಕಾರಕ್ಕೆ ಪ್ರಸ್ತಾಪ ಸಲ್ಲಿಸಲು ತೀರ್ಮಾನಿಸಿದರು.

ಸಭೆಯ ಅಧ್ಯಕ್ಷತೆಯನ್ನು ನಗರಸಭೆ ಅಧ್ಯಕ್ಷೆ ಲಕ್ಷ್ಮೀದೇವಮ್ಮ ವಹಿಸಿದ್ದರು, ಉಪಾಧ್ಯಕ್ಷೆ ಸಂಗೀತಾ, ಸ್ಥಾಯಿ ಸಮಿತಿ ಅಧ್ಯಕ್ಷ ಫೈರೋಜ್ ಖಾನ್, ಪೌರಾಯುಕ್ತ ಪ್ರಸಾದ್ ಅಧಿಕಾರಿಗಳು ಸದಸ್ಯರು ಇದ್ದರು.

Leave a Reply

Your email address will not be published. Required fields are marked *

error: Content is protected !!