
ಮೊಪೆಡ್ ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಮೊಪೆಡ್ ಸವಾರರಿಬ್ಬರಿಗೆ ಗಾಯಗಳಾಗಿದ್ದು, ಗಾಯಾಳುಗಳನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ.
ತಾಲೂಕಿನ ಕಂಟನಕುಂಟೆ ಮೂಲಕ ಹಾದು ಹೋಗಿರುವ ಯಲಹಂಕ ಹಾಗೂ ಹಿಂದೂಪುರ ಹೆದ್ದಾರಿಯಲ್ಲಿಂದು ಸಂಜೆ ನಡೆದಿದೆ.
ದೊಡ್ಡಬಳ್ಳಾಪುರ ತಾಲೂಕಿನ ತಿರುಮಗೊಂಡನಹಳ್ಳಿ ಗ್ರಾಮದ ಸಿದ್ದಪ್ಪ (75), ನಾರಾಯಣಪ್ಪ (80) ಗಾಯಗೊಂಡವರು.
ಸಿದ್ದಪ್ಪ ಹಾಗೂ ನಾರಾಯಣಪ್ಪನವರು ನಗರದ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದು ಮರಳಿ ಊರಿಗೆ ವಾಪಸ್ ತೆರಳುವಾಗ ಹಿಂಬದಿಯಿಂದ ಬಂದ ಆಂಧ್ರ ಮೂಲದ ಕಾರು ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಕಾರಿನ ಚಾಲಕ ಡಿಕ್ಕಿ ಹೊಡೆದು ಕಾರಿಂದ ಕೆಳಗೆ ಇಳಿದು ಏನಾಗಿದೆ ಎಂದು ವಿಚಾರಿಸದೇ ದರ್ಪ ಮೆರೆದಿದ್ದಾರೆ ಎಂದು ಆರೋಪಿಸಿ ಉದ್ರಿಕ್ತಗೊಂಡ ಸ್ಥಳೀಯರು ಕಾರಿನ ಚಾಲಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಕೂಡಲೇ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿ ಯಾವುದೇ ಅನಾಹುತ ನಡೆಯದಂತೆ ತಡೆದಿದ್ದಾರೆ.
ದೊಡ್ಡಬಳ್ಳಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ…