ಚೆನ್ನಾದೇವಿ ಅಗ್ರಹಾರ ವಿಎಸ್ಎಸ್ ಎನ್ ಚುನಾವಣೆ: ನೂತನ ಅಧ್ಯಕ್ಷರಾಗಿ ನಾರಾಯಣ್.ಎ ಅವಿರೋಧ ಆಯ್ಕೆ: ಗಣ್ಯರಿಂದ ಅಭಿನಂದನೆ

ದೊಡ್ಡಬಳ್ಳಾಪುರ ತಾಲೂಕಿನ ಮಧುರೆ ಹೋಬಳಿಯ ಚೆನ್ನಾದೇವಿ ಅಗ್ರಹಾರ ವ್ಯವಸಾಯ ಸೇವಾ ಸಹಕಾರ ಸಂಘ(ವಿಎಸ್ಎಸ್ ಎನ್) ಚುನಾವಣೆ ನಡೆದಿದ್ದು, ವಿಎಸ್ಎಸ್ ಎನ್ ನ ನೂತನ ಅಧ್ಯಕ್ಷರಾಗಿ ಕಾಡನೂರು ಪಾಳ್ಯದ ನಾರಾಯಣ್.ಎ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರಾಗಿ ಶಾರದಮ್ಮ ಮುಂದುವರಿದಿದ್ದಾರೆ. ನೂತನವಾಗಿ ವಿಎಸ್ಎಸ್ ಎನ್ ಅಧ್ಯಕ್ಷರಾಗಿ ಆಯ್ಕೆಯಾದ ನಾರಾಯಣ್.ಎ ರವರನ್ನು ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಚುಂಚೇಗೌಡ ಸೇರಿದಂತೆ ಇತರೆ ಗಣ್ಯರು ಅಭಿನಂದಿಸಿದ್ದಾರೆ.

ನಿರ್ದೇಶಕರುಗಳು ಪಟ್ಟಿ:-

ಪುರುಷೋತ್ತಮಗೌಡ

ಬೈಲಪ್ಪ.ಎ

ದೇವರಾಜು

ಮಂಗಳಮ್ಮ

ಶಾರದಮ್ಮ

ಹನುಮಂತಯ್ಯ

ಶ್ರೀನಿವಾಸ್

ಮಾರೇಗೌಡ.ಜಿ

ಗೋವಿಂದರಾಜು

ಗಂಗರಾಜು

ಈ ವೇಳೆ ಕಾಡನೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಚಂದ್ರಶೇಖರ್ ಎಂ.ಸಿ, ವೃತ್ತಿಪರ ನಿರರ್ದೇಶಕರಾದ ಜಿ.ಕೆಂಪೇಗೌಡ ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *