ಕೆರೆಯ ಸಂರಕ್ಷಣಾ ಮಹತ್ವ ತಿಳಿಸಲು ಕೆರೆ ಬಳಿಯ ಗೋಡೆ ಮೇಲೆ ಪ್ರಾಣಿ, ಪಕ್ಷಿ, ಚಿಟ್ಟೆ ಚಿತ್ತಾರ

ತಾಲ್ಲೂಕಿನ ಕೈಗಾರಿಕಾ ಪ್ರದೇಶದಲ್ಲಿನ ಬಾಶೆಟ್ಟಿಹಳ್ಳಿ ಕೆರೆ ಅಂಚಿನ ಒಂದು ಬದಿಗೆ ಇರುವ ಜವಾಹಾರ್ ನವೋದಯ ವಿದ್ಯಾಲಯದ ಎತ್ತರದ ಗೋಡೆ ಈಗ ಬಣ್ಣದ ಬಣ್ಣದ ಪ್ರಾಣಿ, ಪಕ್ಷಿ, ಚಿಟ್ಟೆ, ಬಗೆಬಗೆ ಹೂವಿನ ಸಸಿಗಳ ಚಿತ್ರಗಳಿಂದ ಅಲಂಕೃತಗೊಂಡು ಎಲ್ಲರನ್ನು ಆಕರ್ಷಿಸುವ ತಾಣವಾಗಿ ರೂಪುಗೊಂಡಿದೆ.

ಡಬ್ಲ್ಯೂ ಡಬ್ಲ್ಯೂ ಎಫ್ ಇಂಡಿಯಾ ಸಂಸ್ಥೆಯ ವತಿಯಿಂದ ಬಾಶೆಟ್ಟಿಹಳ್ಳಿ ಕೆರೆಗೆ ಹೊಂದಿಕೊಂಡಿರುವ ಗೋಡೆಯ ಮೇಲೆ ಪರಿಸರ ಮಾಹಿತಿಯ ಚಿತ್ರಗಳನ್ನು ಬಿಡಿಸಲಾಯಿತು.

ಕೆರೆಗೆ ಬರುವವರಿಗೆ ಮತ್ತು ಹಾದು ಹೋಗುವವರಿಗೆ ಕೆರೆಯ ಸಂರಕ್ಷಣಾ ಮಹತ್ವ ತಿಳಿಸುವ ಉದ್ದೇಶದಿಂದ, ಕೆರೆಯ ಜೀವವೈವಿದ್ಯತೆ, ಕೆರೆಗಳ ಮಹತ್ವ, ಕೆರೆಗಳಿಗೆ ಇರುವ ತೊಂದರೆಗಳು ಮತ್ತು ಚಿಟ್ಟೆಗಳ ಬಗ್ಗೆ ಚಿತ್ರಗಳನ್ನು ಬಿಡಿಸಲಾಯಿತು.

ಅದೇ ಆವರಣದಲ್ಲಿ ಚಿಟ್ಟೆ ಉದ್ಯಾನವನ್ನು ಸಹ ಮಾಡಲಾಗುತ್ತಿದೆ.

ಅರ್ಥ್ ಸ್ಟುಡಿಯೋಸ್ನ (eARTh Studios) ಕಲಾವಿದರಾದ ಕೌಶಿಕ್ ಕೆ ಎಸ್, ಸಾಕ್ಷಿ ಕೆ, ಆಶಾ ಎಸ್ ಮಾರ್ಗದರ್ಶನದಲ್ಲಿ ಹೆಚ್ ಎಸ್ ಬಿ ಸಿ ಯ 50 ಉದ್ಯೋಗಿಗಳು ಚಿತ್ರಗಳನ್ನು ಬಿಡಿಸಿದರು.

ಈ ಸಂದರ್ಭದಲ್ಲಿ ಡಬ್ಲ್ಯೂ ಎಫ್ ಇಂಡಿಯಾ ಸಂಸ್ಥೆಯ ಲೋಹಿತ್ ವೈ ಟಿ, ಶಶಿಕಲಾ ಐಯ್ಯೇರ್, ಡಾ. ಶಾಂತನು ಗುಪ್ತ, ಕಾರ್ತಿಕ್ ಗೌಡ ನವೋದಯ ಚಾರಿಟೆಬಲ್ ಟ್ರಸ್ಟಿನ ಜನಾರ್ಧನ ಆರ್ ಇದ್ದರು.

Leave a Reply

Your email address will not be published. Required fields are marked *