ಹುಲುಕುಡಿ ವೀರಭದ್ರಸ್ವಾಮಿ ಮತ್ತು ಪ್ರಸನ್ನ ಭದ್ರಕಾಳಮ್ಮ ರಥೋತ್ಸವ: ಜಾತ್ರೆಯಲ್ಲಿ ಕಳ್ಳರ ಕೈಚಳಕ: ವೃದ್ಧೆಯ ಮೊಬೈಲ್, ಪರ್ಸ್ ಎಗರಿಸಿ ಪರಾರಿಯಾಗಲು ಯತ್ನ:‌ ಅಲ್ಲೇ ಇದ್ದ ಪೊಲೀಸ್ ಸಿಬ್ಬಂದಿ ಕಂಡು ಮೊಬೈಲ್, ಪರ್ಸ್ ಬಿಸಾಡಿ ಎಸ್ಕೇಪ್: ಮೊಬೈಲ್, ಪರ್ಸ್ ವೃದ್ಧೆಗೆ ವಾಪಸ್ 

ದೊಡ್ಡಬಳ್ಳಾಪುರ ತಾಲ್ಲೂಕಿನ ಹುಲುಕುಡಿ ವೀರಭದ್ರಸ್ವಾಮಿ ಕ್ಷೇತ್ರದಲ್ಲಿ ಕ್ಷೇತ್ರಾಭಿವೃದ್ಧಿ ಟ್ರಸ್ಟ್ ವತಿಯಿಂದ ರಥಸಪ್ತಮಿ ಅಂಗವಾಗಿ ನಿನ್ನೆ (ಫೆ.05) ವೀರಭದ್ರಸ್ವಾಮಿ ಮತ್ತು ಪ್ರಸನ್ನ ಭದ್ರಕಾಳಮ್ಮ ರಥೋತ್ಸವ ನಡೆಯಿತು.

ರಥೋತ್ಸವ ಕಣ್ತುಂಬಿಕೊಳ್ಳಲು ವೃದ್ಧರು, ಮಕ್ಕಳು, ಯುವಕರು ಸೇರಿದಂತೆ ಎಲ್ಲರು ಆಗಮಿಸಿದ್ದರು. ಜನಜಂಗಳಿಯಲ್ಲಿ ಸಾರ್ವಜನಿಕ‌ ಹಿತದೃಷ್ಟಿಯಿಂದ  ಪೊಲೀಸ್ ಬಿಗಿಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಇದರ ನಡುವೆಯೂ ಕಳ್ಳರ ಕೈಚಳಕ ತೋರಿಸಲು ಯತ್ನಿಸಿದ್ದಾರೆ.

ಕಳ್ಳರು ಜಾತ್ರೆಯಲ್ಲಿ ವೃದ್ಧರನ್ನೇ ಟಾರ್ಗೆಟ್ ಮಾಡಿ, ವೃದ್ಧೆ ಬಳಿಯಿದ್ದ ಮೊಬೈಲ್ ಹಾಗೂ ಪರ್ಸ್ ನ್ನು ಎಗರಿಸಿ ಪರಾರಿಯಾಗಲು ಕಳ್ಳ ಯತ್ನಿಸಿದ್ದಾನೆ.‌ ಅಜ್ಜಿ ಇದ್ದ ಸ್ವಲ್ಪ ದೂರದಲ್ಲೇ ಪೊಲೀಸ್ ಸಿಬ್ಬಂದಿ ಇರುವುದನ್ನು ಗಮನಿಸಿದ ಕಳ್ಳ ಕಳವು ಮಾಡಿದ್ದ ಮೊಬೈಲ್, ಪರ್ಸ್ ಅಲ್ಲೇ ಎಸೆದು ಪರಾರಿಯಾಗಿದ್ದಾನೆ.

ಸದ್ಯ ಮೊಬೈಲ್ ಹಾಗೂ ಪರ್ಸ್ ನ್ನು ಪೊಲೀಸರ ವಶಕ್ಕೆ ಪಡೆದು ವೃದ್ಧೆಗೆ ಒಪ್ಪಿಸಿದ್ದಾರೆ.

ದೊಡ್ಡಬೆಳವಂಗಲ ಪೊಲೀಸರ ಕಾರ್ಯವೈಖರಿಗೆ ವೃದ್ಧೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!