
ದೊಡ್ಡಬಳ್ಳಾಪುರ: ರಥ ಸಪ್ತಮಿ ಹಿನ್ನೆಲೆ ಪತಂಜಲಿ ಯೋಗ ಶಿಕ್ಷಣ ಸಮಿತಿ ವತಿಯಿಂದ ಸಾಮೂಹಿಕ ಸೂರ್ಯ ನಮಸ್ಕಾರ ಕಾರ್ಯಕ್ರಮವನ್ನು ದೊಡ್ಡಬಳ್ಳಾಪುರದ ಸುಭಾಷ್ ನಗರದಲ್ಲಿರುವ ಪತಂಜಲಿ ಯೋಗ ಶಿಕ್ಷಣ ಕೇಂದ್ರದಲ್ಲಿ ಆಯೋಜನೆ ಮಾಡಲಾಗಿತ್ತು.
ಸೂರ್ಯ ನಮಸ್ಕಾರ ಜೊತೆಗೆ ಅಗ್ನಿಹೋತ್ರ ಹೋಮ ನಡೆಸಿ ರಥ ಸಪ್ತಮಿ ಆಚರಣೆ ಮಾಡಲಾಯಿತು. ನೂರ ಒಂದು ಬಾರಿ ಯೋಗ ಮಾಡುವ ಮೂಲಕ ಸೂರ್ಯ ನಮಸ್ಕಾರ ಮಾಡಲಾಯಿತು.
ರಥಸಪ್ತಮಿಯಂದು ಸೂರ್ಯ ನಮಸ್ಕಾರ ಮಾಡಿದರೆ ಸಾಕಷ್ಟು ನಕಾರಾತ್ಮಕ ಶಕ್ತಿಗಳು ತೊಲಗಿ ಆರೋಗ್ಯ ಲಭಿಸುತ್ತದೆ ಎನ್ನುವ ಪ್ರತೀತಿ ಹಿನ್ನೆಲೆ ನೂರಾರು ಮಂದಿ ಯೋಗಪಟುಗಳು ಭಾಗಿಯಾಗಿ ಸೂರ್ಯ ನಮಸ್ಕಾರ ಮಾಡಿದರು.
ಸೂರ್ಯ ದೇವನ ಜನ್ಮ ದಿನಾಚರಣೆಯು ಸಹ ರಥ ಸಪ್ತಮಿಯಂದೆ ಇದೆ. ಈ ಹಿನ್ನೆಲೆ ಸಾಮೂಹಿಕವಾಗಿ ಸೂರ್ಯ ನಮಸ್ಕಾರ ಮಾಡಿ ಪ್ರಾರ್ಥನೆ ಸಲ್ಲಿಸಲಾಯಿತು.