ದೇವನಹಳ್ಳಿಯ ಕನ್ನಮಂಗಲ ಗೇಟ್ ಬಳಿ ಭೀಕರ ಅಪಘಾತವಾಗಿದ್ದು, ಅಪಘಾತದಲ್ಲಿ ಇಬ್ಬರು ವ್ಯಕ್ತಿಗಳು ಭೀಕರವಾಗಿ ಸಾವನ್ನಪ್ಪಿದ್ದಾರೆ.
ಕನ್ನಮಂಗಲ ಗ್ರಾಮದ ಕಡೆಯಿಂದ ಬರುತ್ತಿದ್ದ ಬೈಕ್ ಗೆ ದೇವನಹಳ್ಳಿ ಕಡೆಯಿಂದ ಬರುತ್ತಿದ್ದ ಟಿಪ್ಪರ್ ಲಾರಿ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಬೈಕ್ ಸವಾರರ ದೇಹಗಳು ಛಿದ್ರಛಿದ್ರವಾಗಿವೆ.
ಮಹಮದ್ (42), ಮಸ್ತಾನ್ ಅಲಿ (30) ಮೃತಪಟ್ಟವರು. ಮೃತ ದುರ್ದೈವಿಗಳನ್ನು ಬಳ್ಳಾರಿ ಮೂಲದವರು ಎಂದು ಗುರುತಿಸಲಾಗಿದೆ.
ಫ್ರಶ್ ಟು ಹೋಮ್ ಕಂಪನಿಯಲ್ಲಿ ಡಿಲವರಿ ಬಾಯ್ ಆಗಿ ಕೆಲಸ ಮಾಡ್ತಿದ್ದ ಮೃತ ವ್ಯಕ್ತಿಗಳು.
ದೇವನಹಳ್ಳಿ ತಾಲೂಕು ಭುವನಹಳ್ಳಿಯಲ್ಲಿ ಮನೆ ಮಾಡಿಕೊಂಡು, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಮೃತ ದೇಹಳನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ.