ಕರ್ನಾಟಕ ಸ್ಟೇಟ್ ರೈಫಲ್ ಅಸೋಷಿಯನ್ ಸಹಯೋಗದಲ್ಲಿ ನಡೆದ ಕರ್ನಾಟಕ ಸ್ಟೇಟ್ ಶೂಟಿಂಗ್ ಚಾಂಪಿಯನ್ ಶಿಪ್ ನಡೆದ 10 ಮೀಟರ್ ಏರ್ ರೈಫಲ್ ಸ್ಪರ್ಧೆಯಲ್ಲಿ ಧನ್ವಿಕ್ ವಿಜಯ್‌ಕುಮಾರ್ ಅತ್ಯುತ್ತಮ ಸಾಧನೆ ಮೂಲಕ ಎಲ್ಲರ ಗಮನ ಸೆಳೆದಿದ್ದಾನೆ.
ಇಲ್ಲಿಯವರೆಗೆ ಧನ್ವಿಕ್ ವಿಜಯ್‌ಕುಮಾರ್ ಒಟ್ಟು 6 ಚಿನ್ನ ಹಾಗೂ 2 ಬೆಳ್ಳಿ ಪದಕ ಗೆದ್ದಿದ್ದಾರೆ.
ಮಾಸ್ಟರ್ ಧನ್ವಿಕ್ ಅವರು ಕಳೆದ ಎರಡು ವರ್ಷಗಳಿಂದ ರಾಷ್ಟ್ರೀಯ ತರಬೇತುದಾರ ಶರಣೇಂದ್ರ ಕೆವೈ ಅವರ ಮಾರ್ಗದರ್ಶನದಲ್ಲಿ ಹಾಕ್-ಐ ರೈಫಲ್ ಮತ್ತು ಪಿಸ್ತೂಲ್ ಶೂಟಿಂಗ್ ಅಕಾಡೆಮಿಯಲ್ಲಿ ತರಬೇತಿ ಪಡೆದು ಹಲವು ಸಾಧನೆಗಳನ್ನ ಮಾಡಿದ್ದಾರೆ. ತರಬೇತಿದಾರರಾದ ಶರಣೇಂದ್ರ ಕೆ.ವೈ ರವರ ಮಾರ್ಗದರ್ಶನದಲ್ಲಿ ಅಂತರಾಷ್ಟ್ರೀಯ ಮಟ್ಟದ ಸ್ಪರ್ಧೆಗಾಗಿ ತಯಾರಿ ನಡೆಸಿದ್ದಾರೆ.
ಮಾಸ್ಟರ್ ಧನ್ವಿಕ್ ಸಾಧನೆಗಳು:
1. ಹಿರಿಯ ವರ್ಗ: ವೈಯಕ್ತಿಕ ಚಿನ್ನದ ಪದಕ
2. ಜೂನಿಯರ್ ವರ್ಗ: ವೈಯಕ್ತಿಕ ಚಿನ್ನದ ಪದಕ
3. ಯುವ ವರ್ಗ: ವೈಯಕ್ತಿಕ ಬೆಳ್ಳಿ ಪದಕ
4. ಉಪ ಯುವ ವರ್ಗ: ವೈಯಕ್ತಿಕ ಬೆಳ್ಳಿ ಪದಕ
5. ತಂಡದ ಈವೆಂಟ್‌ಗಳು (ಹಿರಿಯ, ಕಿರಿಯ, ಯುವ, ಉಪ ಯುವಕ): ಚಿನ್ನದ ಪದಕ