ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ ಹೊಡೆದಿರುವ ಘಟನೆ ತಾಲೂಕಿನ ಗಂಟಿಗಾನಹಳ್ಳಿ ಸಮೀಪ ಇಂದು ಸಂಜೆ ನಡೆದಿದೆ.
ಗಂಟಿಗಾನಹಳ್ಳಿ ಸಮೀಪದ ರಸ್ತೆ ಪಕ್ಕದಲ್ಲಿರುವ ಮನೆ ತಡೆಗೋಡೆಗೆ ಡಿಕ್ಕಿ ಹೊಡೆದು ಮನೆ ಮುಂದೆ ಇರುವ ಗೇಟ್ ಬಳಿ ಮುಗುಚಿ ಬಿದ್ದಿದೆ. ಕಾರು ಗಂಟಿಗಾನಹಳ್ಳಿ ಕಡೆಯಿಂದ ತೂಬಗೆರೆ ಕಡೆ ಬರುವ ವೇಳೆ ಅಪರಿಚಿತ ವಾಹನ ಅಡ್ಡಬಂದಿದ್ದು, ಅಡ್ಡಬಂದ ವಾಹನವನ್ನು ಪಾರುಮಾಡಲು ಹೋದಾಗ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ ಹೊಡೆದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ…
ಅದೃಷ್ಟವಶಾತ್ ಕಾರಿನ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.