ರೈಲಿಗೆ ಸಿಲುಕಿ ಅಪರಿಚಿತ ಮಹಿಳೆ ಸಾವು

ಗೌರಿಬಿದನೂರು ಮತ್ತು ದೇವರಪಲ್ಲಿ ರೈಲು ನಿಲ್ದಾಣಗಳ ಮಧ್ಯೆ ವಿದುರಾಶ್ವತ್ಥ ಹತ್ತಿರ ಅಪರಿಚಿತ ಮಹಿಳೆ ರೈಲಿಗೆ ಸಿಲುಕಿ ಇಂದು ಮೃತಪಟ್ಟಿದ್ದಾಳೆ.

ಯಶವಂತಪುರ ರೈಲ್ವೆ ಪೊಲೀಸ್ ಠಾಣೆ ಯು.ಡಿ ಆರ್.ನಂ. 11/2025 ಕಲಂ 194 BNSS ರೀತ್ಯಾ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.

ವಯಸ್ಸು ಸುಮಾರು 60 ವರ್ಷವಾಗಿರಬಹುದು, ಮೃತಳ ಹೆಸರು ವಿಳಾಸ ತಿಳಿದು ಬಂದಿರುವುದಿಲ್ಲ.

*ಚಹರೆ* – 5.2 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ದುಂಡನೆಯ ಮುಖ, ತಲೆಯಲ್ಲಿ ಸುಮಾರು ಒಂದು ಅಡಿ ಉದ್ದದ ಕಪ್ಪು- ಬಿಳಿ ಮಿಶ್ರಿತ ತಲೆ ಕೂದಲು ಇದೆ. ಸಾಧಾರಣವಾದ ಮೈಕಟ್ಟು ಹೊಂದಿರುತ್ತಾರೆ. ಮೃತಳ ಬಳಿ ಒಂದು ಎಲೆ ಅಡಿಕೆ ಚೀಲ ಇರುತ್ತದೆ.

*ಬಟ್ಟೆಗಳು* – ಪಿಂಕ್ ಕುಂಕಮ ಬಣ್ಣದ ಜಾಕೆಟ್ ನೀಲಿ-ಬಿಳಿ ಮಿಶ್ರಿತ ಹೂ ಡಿಸೈನ್ ವುಳ್ಳ ಬಿಸ್ಕತ್ ಕಲರ್ ಸೀರೆ, ತಿಳಿ ಹಸಿರು ಬಣ್ಣದ ಒಳಲಂಗ ಇದ್ದು ಕಾಲಿನಲ್ಲಿ ಬಿಳಿಯ ಒಂದು ಜೊತೆ ಚಪ್ಪಲಿ ಇದೆ. ವಾರಸುದಾರರು  ಯಾರಾದರು ಕಂಡು ಬಂದಲ್ಲಿ ರೈಲ್ವೆ PSI 9480802118/ ದೊಡ್ಡಬಳ್ಳಾಪುರ ರೈಲ್ವೆ ಪೊಲೀಸ್  9480802143, 9902193960 ಸಂಪರ್ಕಿಸಲು ಕೋರಲಾಗಿದೆ.

Leave a Reply

Your email address will not be published. Required fields are marked *