ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ರಾಮಚಂದ್ರೇಗೌಡ, ಉಪಾಧ್ಯಕ್ಷರಾಗಿ ಎನ್ ಗೌಡಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಂಘದ ನಿರ್ದೇಶಕರುಗಳಾಗಿ ನಂಜುಂಡಪ್ಪ, ಮುನಿಶಾಮಯ್ಯ, ರಾಮಕೃಷ್ಣ, ನಾರಾಯಣ ಸ್ವಾಮಿ, ಎಂ.ಸಿ ಮುನೇಗೌಡ, ಎಂ.ಮುನೇಗೌಡ, ಅನಸೂಯಮ್ಮ, ಜಯಮ್ಮ, ಸುಬ್ರಮಣಿ ಇವರುಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಕಾರ್ಯದರ್ಶಿ ಸಿ.ಮಂಜುನಾಥ್ ತಿಳಿಸಿರುತ್ತಾರೆ.
ಅವಿರೋಧವಾಗಿ ಆಯ್ಕೆಯಾಗಿರುವ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಎಲ್ಲಾ ಪದಾಧಿಕಾರಿಗಳನ್ನು ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ್ದಾರೆ.