ಸುಗಟೂರು ಸೊಸೈಟಿಗೆ ಅಂಕತಟ್ಟಿ ಬಾಬು ಸತತ ಎರಡನೇ ಬಾರಿಗೆ ಅಧ್ಯಕ್ಷರಾಗಿ ಅವಿರೋಧ ಆಯ್ಕೆ

ಕೋಲಾರ: ತಾಲೂಕಿನ ಸುಗಟೂರು ಪ್ರಾಥಮಿಕ ಕೃಷಿ ಸಹಕಾರ ಸಂಘದ 2025-30ನೇ ಸಾಲಿನ ಆಡಳಿತ ಮಂಡಳಿ ಅಧ್ಯಕ್ಷರಾಗಿ ಎರಡನೇ ಬಾರಿಗೆ ಅಧ್ಯಕ್ಷರಾಗಿ ಅಂಕತಟ್ಟಿ ಎ.ಸಿ ಭಾಸ್ಕರ್ ಬಾಬು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಶನಿವಾರ ಸಂಘದ ಆವರಣದಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಭಾಸ್ಕರ್ ಬಾಬು ಉಪಾಧ್ಯಕ್ಷ ಸ್ಥಾನಕ್ಕೆ ವಿಜಯಕುಮಾರ್ ಮಾತ್ರವೇ ನಾಮಪತ್ರ ಸಲ್ಲಿಸಿದ್ದರು ಬೇರೆ ಯಾರು ನಾಮಪತ್ರ ಸಲ್ಲಿಸದ ಕಾರಣ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಸಹಕಾರ ಇಲಾಖೆಯ ವೆಂಕಟೇಶ್ ಬಾಬು ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು ಸೊಸೈಟಿ ಸಿಇಒ ಪುಟ್ಟರಾಜು ಸಿಬ್ಬಂದಿ ಇದ್ದರು.

ನೂತನ ಅಧ್ಯಕ್ಷ ಎ.ಸಿ ಭಾಸ್ಕರ್ ಬಾಬು ಮಾತನಾಡಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹಾಗೂ ಕಾಂಗ್ರೆಸ್ ಮುಖಂಡರ ಮಾರ್ಗದರ್ಶನದ ಜೊತೆಗೆ ಸಂಘದ ಎಲ್ಲಾ ನಿರ್ದೇಶಕರು ಸಹಕಾರದಿಂದ ಸೊಸೈಟಿಗೆ ಸತತವಾಗಿ ಎರಡನೇ ಬಾರಿಗೆ ಅಧ್ಯಕ್ಷನಾಗಿದ್ದು ಸರ್ಕಾರದಿಂದ ಬರುವ ಸೌಲಭ್ಯಗಳನ್ನು ರೈತರಿಗೆ ತಲುಪಿಸಲು ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಮುಂದೆ ಜಿಲ್ಲೆಯಲ್ಲಿ ಮಾದರಿ ಸಂಘವನ್ನಾಗಿ ಎಲ್ಲರ ಸಹಕಾರ ಮಾರ್ಗದರ್ಶನದಲ್ಲಿ ಮುನ್ನಡೆಸುತ್ತೇನೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ನೂತನ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ನಿರ್ದೇಶಕರನ್ನು ಎಂಎಲ್ಸಿ ಎಂ.ಎಲ್ ಅನಿಲ್ ಕುಮಾರ್, ಕೆಪಿಸಿಸಿ ಸದಸ್ಯ ಸಂಜಯ್ ರೆಡ್ಡಿ, ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷರಾದ ಚಂಜಿಮಲೆ ರಮೇಶ್, ವೆಲಗಲಬುರೆ ಶಶಿಧರ್, ಬೊಮ್ಮಸಂದ್ರ ಕೃಷೇಗೌಡ, ಗ್ರಾಪಂ ಅಧ್ಯಕ್ಷ ಭೂಪತಿಗೌಡ, ಮುಖಂಡರಾದ ಶೆಟ್ಟಿಮಾದಮಂಗಲ ಮಂಜುನಾಥ್, ಮುಳ್ಳಹಳ್ಳಿ ಚಂದ್ರೇಗೌಡ, ಜನಘಟ್ಟ ಸತೀಶ್, ಸುಗಟೂರು ರವಿ, ಎಂ.ಕೆ ಮಂಜುನಾಥ್, ತುರಾಂಡಹಳ್ಳಿ ರವಿ ಅಭಿನಂದನೆ ಸಲ್ಲಿಸಿದರು

ಈ ಸಂದರ್ಭದಲ್ಲಿ ನಿರ್ದೇಶಕರಾದ ಟಿ.ವಿ ಕೃಷ್ಣಪ್ಪ, ಎಂ.ಎನ್ ಶಂಕರರೆಡ್ಡಿ, ಎ.ಎನ್ ಹನುಮೇಗೌಡ, ಗೋಪಾಲಕೃಷ್ಣ, ಶ್ಯಾಮಲ, ಸವಿತಾ.ಎನ್ ಶೆಟ್ಟಿ, ಮುನಿವೆಂಕಟಪ್ಪ, ರಮೇಶ್ ಬಾಬು, ವೆಂಕಟರಾಮರೆಡ್ಡಿ, ಡಿ.ಗೋಪಾಲಪ್ಪ, ಕಾಂಗ್ರೆಸ್ ಮುಖಂಡರು ಕಾರ್ಯಕರ್ತರು ಇದ್ದರು.

Leave a Reply

Your email address will not be published. Required fields are marked *

error: Content is protected !!