ಪಕ್ಷಬೇಧ ಮರೆತು ಅಪ್ಪಯ್ಯಣ್ಣನವರ ಕುಟುಂಬಕ್ಕೆ ಧೈರ್ಯ ತುಂಬುವ ಕೆಲಸ ಮಾಡಲಾಗಿದೆ- ಜೆಡಿಎಸ್ ರಾ.ಪ್ರ.ಕಾ ಹರೀಶ್ ಗೌಡ

ಅಪ್ಪಯ್ಯಣ್ಣನವರ ಅಗಲಿಕೆ ನಮಗೆಲ್ಲಾ ನೋವನ್ನುಂಟು ಮಾಡಿದೆ. ಅಪ್ಪಯ್ಯಣ್ಣನವರು ನಮ್ಮ ಜೊತೆಯಲ್ಲೇ ಇರುತ್ತಾರೆ ಎಂಬ ಭಾವನೆ ಇದೆ. ಇಂದು ಪಕ್ಷಬೇಧ ಮರೆತು ಅಪ್ಪಯ್ಯಣ್ಣನವರ ಕುಟುಂಬಕ್ಕೆ ಧೈರ್ಯ ತುಂಬುವ ಕೆಲಸ ಮಾಡಲಾಗಿದೆ ಎಂದರು.

ಇತ್ತೀಚಿಗೆ ನಿಧನರಾದ ಜೆಡಿಎಸ್ ಹಿರಿಯ ಮುಖಂಡ, ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಚ್.ಅಪ್ಪಯ್ಯಣ್ಣ ಅವರ ನುಡಿ ನಮನ ಕಾರ್ಯಕ್ರಮವನ್ನು ಹಾಡೋನಹಳ್ಳಿ ಗ್ರಾಮದಲ್ಲಿ ಆಯೋಜನೆ ಮಾಡಲಾಗಿತ್ತು. ನುಡಿ ನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು

ತೂಬಗೆರೆ ಹೋಬಳಿ ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರ ಚುನಾವಣೆಗೆ ಮಾತ್ರ ಬೇರೆ ಇದೆ ಅಷ್ಟೇ, ಇನ್ನುಳಿದ ಸ್ಥಳೀಯ ಸಂಸ್ಥೆ ಚುನಾವಣೆಗಳಾದ ತಾಲೂಕು, ಜಿಲ್ಲಾ, ಗ್ರಾಮ ಪಂಚಾಯಿತಿ ಚುನಾವಣೆಗಳು, ಸೊಸೈಟಿ, ಹಾಲು ಉತ್ಪಾದಕರ ಸಹಕಾರ ಸಂಘಗಳ ಚುನಾವಣೆಗಳಿಗೆ ಅಪ್ಪಯ್ಯಣ್ಣನವರ ನೇತೃತ್ವ ಬಹಳ ಅವಶ್ಯಕತೆ ಇತ್ತು. ಅಪ್ಪಯ್ಯಣ್ಣನವರ ಕುಟುಂಬವು ಸಮಾಜ ಸೇವೆಯಲ್ಲಿ, ಜೆಡಿಎಸ್ ಪಕ್ಷಕ್ಕೆ ಸಹಕಾರ ಕೊಡುತ್ತೇವೆ ಎಂದು ತಿಳಿಸಿದೆ ಎಂದರು.

ಮುಂದಿನ ದಿನಗಳಲ್ಲಿ ತಾಲೂಕು ಮಟ್ಟದಲ್ಲಿ ಅಪ್ಪಯ್ಯಣ್ಣನವರ ನುಡಿ ನಮನ ಕಾರ್ಯಕ್ರಮ ಹಮ್ಮಿಕೊಳ್ಳಲು ಸಿದ್ಧತೆ ಮಾಡಲಾಗುವುದು. ಈ ನಿಟ್ಟಿನಲ್ಲಿ ಸದಾ ಅವರನ್ನು ನೆನಪಿಸಿಕೊಳ್ಳುವ ಪ್ರಯತ್ನ ಮಾಡುತ್ತೇವೆ ಎಂದರು…

Leave a Reply

Your email address will not be published. Required fields are marked *

error: Content is protected !!