ಸಾಮಾಜಿಕ ಜಾಲತಾಣದಲ್ಲಿ ಬಸವ ಮೂರ್ತಿ ಮಾದರ ಚೆನ್ನಯ್ಯ ಬಗ್ಗೆ ಅವಹೇಳನ ಆರೋಪ: ಬಸವ ಮೂರ್ತಿ ಮಾದರ ಚೆನ್ನಯ್ಯ ಸೇವಾ ಸಮಿತಿ ಖಂಡನೆ

ಡಿ.3ರಂದು ಸಾಮಾಜಿಕ ಜಾಲತಾಣದಲ್ಲಿ ಕೆಲವರು ಬಸವ ಮೂರ್ತಿ ಮಾದರ ಚೆನ್ನಯ್ಯ ಬಗ್ಗೆ ಅವಹೇಳನ ಮಾಡಿದ್ದಾರೆ. ಇದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಸಮಾಜದಲ್ಲಿ ಕೆಳಮಟ್ಟದಲ್ಲಿರುವಂತಹ ಸಮುದಾಯವನ್ನು ಶಿಕ್ಷಣ, ಉದ್ಯೋಗ, ಮೀಸಲಾತಿ ಸೇರಿದಂತೆ ಎಲ್ಲಾ ರಂಗಗಳಲ್ಲಿ ಮೇಲ್ಮಟ್ಟಕ್ಕೆ ಕೊಂಡೊಯ್ಯಲು ಸ್ವಾಮೀಜಿ ಬಹಳ ಶ್ರಮ ವಹಿಸಿದ್ದಾರೆ. ಅಂತವರ ಬಗ್ಗೆ ಅವಹೇಳನ ಮಾಡುವುದು ಅಕ್ಷರಶಃ ಅಪರಾಧ, ಅವಹೇಳ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಬಸವ ಮೂರ್ತಿ ಮಾದರ ಚೆನ್ನಯ್ಯ ಸೇವಾ ಸಮಿತಿ ರಾಜ್ಯ ಉಪಾಧ್ಯಕ್ಷ ನರಸಿಂಹ ಮೂರ್ತಿ ಒತ್ತಾಯಿಸಿದರು.

ವಡ್ಡಗೆರೆ ಡಾ.ನಾಗರಾಜಯ್ಯ, ಬೆಲ್ಲಹಳ್ಳಿ ಯತಿರಾಜ್, ಸಿ.ಕೆ.ಮಹೇಶ್ ಎಂಬ ಈ‌ ಮೂವರು ಸ್ವಾಮೀಜಿ ಕುರಿತು ಏನೂ ತಿಳಿಯದೇ ಎಲ್ಲೋ ಕುಳಿತು ಕಾಫಿ, ಟೀ ಕುಡಿಯುತ್ತಾ ವಿರೋಧ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಚರ್ಚೆ ಮಾಡುವುದಾದರೆ ಮಠಕ್ಕೆ ಬಂದು ನೇರಾನೇರ ಮಾತಾಡಿ, ಅದನ್ನ ಬಿಟ್ಟು ಸ್ವಾಮೀಜಿ ಸಾಧನೆ ಬಗ್ಗೆ ತಿಳಿಯದೇ ಮಾತಾಡಿದರೆ ಸಮುದಾಯಕ್ಕೆ ಧಕ್ಕೆ ಬರುತ್ತದೆ ಎಂದು ಹೇಳಿದರು.

ಸ್ವಾಮೀಜಿ ನಮ್ಮ ಪ್ರತಿನಿಧಿ ಅಲ್ಲ ಅನ್ನೋದು ಮುರ್ಖತನ. ಸ್ವಾಮೀಜಿ ನಮ್ಮ ಎಂದೆಂದಿಗೂ ನಮ್ಮ ಪ್ರತಿನಿಧಿ, ನಮ್ಮ ಸಮುದಾಯದವರು, ನಮ್ಮ ಗುರುಗಳು ಎಂದರು.

ಅದೇರೀತಿ ಇತ್ತೀಚೆಗೆ ಸ್ವಾಮೀಜಿಗೆ ಕೊಲೆ ಬೆದರಿಕೆ ಇರುವುದರಿಂದ ಹೆಚ್ಚಿನ ಭದ್ರತೆ ಒದಗಿಸಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದರು.

ಮಾದರ ಚೆನ್ನಯ್ಯ ಸೇವಾ ಸಮಿತಿ ಕಾರ್ಯಾಧ್ಯಕ್ಷ ಹನುಮಂತರಾಜು ಮಾತನಾಡಿ, ಸ್ವಾಮೀಜಿ ಸಮುದಾಯದ ಏಳಿಗೆಗಾಗಿ ಶ್ರಮಿಸುತ್ತಿರುವುದು ನೋಡಿ ಕೆಲವರು ಸಹಿಸದೇ ಅವಹೇಳನ ಮಾಡುತ್ತಿದ್ದಾರೆ.

ವಡ್ಡಗೆರೆ ಡಾ.ನಾಗರಾಜಯ್ಯ, ಬೆಲ್ಲಹಳ್ಳಿ ಯತಿರಾಜ್, ಸಿ.ಕೆ.ಮಹೇಶ್ ಅವರು ಸ್ವಾಮೀಜಿ ಕುರಿತು ಸಮಾಜಿಕ ಜಾಲತಾಣದಲ್ಲಿ ತೇಜೋವಧೆ ಮಾಡುತ್ತಿದ್ದಾರೆ. ವಡ್ಡಗೆರೆ ಡಾ.ನಾಗರಾಜಯ್ಯ, ಬೆಲ್ಲಹಳ್ಳಿ ಯತಿರಾಜ್, ಸಿ.ಕೆ.ಮಹೇಶ್ ನಮ್ಮ ಸಮುದಾಯದಲ್ಲಿ ಏನೇನೂ ಅಲ್ಲ. ಕೇವಲ ಕಾರ್ಯಗಳಲ್ಲಿ ಭಾಷಣ ಮಾಡೋದಕ್ಕೆ ಮಾತ್ರ ಹೋಗುತ್ತಾರೆ ಅಷ್ಟೇ, ಸಮಾಜದ ಆಗು-ಹೋಗುಗಳು, ಕಷ್ಟ ಸುಖ, ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ. ಈ ಕೆಲಸವನ್ನು ಸ್ವಾಮೀಜಿ ಕಳೆದ ಇಪ್ಪತ್ಮೂರು ವರ್ಷಗಳಿಂದ ಮಾಡುತ್ತಾ ಬಂದಿದ್ದಾರೆ. ಅಂತವರ ಬಗ್ಗೆ ಈ‌ ಮೂರು ಜನ ಮಾತನಾಡುತ್ತಿದ್ದಾರೆ. ಇದನ್ನು ನಾವು ಖಂಡಿಸುತ್ತೇವೆ ಎಂದರು.

ಹುಬ್ಬಳ್ಳಿಯಲ್ಲಿ ನೂರು ಎಕರೆ ಜಮೀನನ್ನು ಸರ್ಕಾರದಿಂದ ಮಂಜೂರು ಮಾಡಿಸಿಕೊಂಡು ಸಮುದಾಯದ ಮಕ್ಕಳಿಗೆ ವಿದ್ಯಾಭ್ಯಾಸ ನೀಡಲು ಶಾಲಾ-ಕಾಲೇಜು ಕಟ್ಟಲು ಮುಂದಾಗಿದ್ದಾರೆ. ಸ್ವಾಮೀಜಿಯ ಇಂತಹ ಸಾಧನೆಗಳನ್ನು ಸಹಿಸದ ಇವರು ತೊಡಕುಗಳನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಸ್ವಾಮೀಜಿ ಬಗ್ಗೆ ಅವಹೇಳನ ಮಾಡಿದ ವಡ್ಡಗೆರೆ ಡಾ.ನಾಗರಾಜಯ್ಯ, ಬೆಲ್ಲಹಳ್ಳಿ ಯತಿರಾಜ್, ಸಿ.ಕೆ.ಮಹೇಶ್ ವಿರುದ್ಧ ದೂರು ದಾಖಲು‌ ಮಾಡಲಾಗುವುದು.

ವಡ್ಡಗೆರೆ ಡಾ.ನಾಗರಾಜಯ್ಯ, ಬೆಲ್ಲಹಳ್ಳಿ ಯತಿರಾಜ್, ಸಿ.ಕೆ.ಮಹೇಶ್ ನವರೇ ಸ್ವಾಮೀಜಿಗಳು ಆಗಬೇಂದು ಆಸೆ ಇದ್ದರೆ ನಮ್ಮ ಸ್ವಾಮೀಜಿಯಿಂದಲೇ ದೀಕ್ಷೆ ತೆಗೆದುಕೊಂಡು ಆಗಿ, ದೀಕ್ಷೆ ತೆಗೆದುಕೊಂಡು ಸಮಾಜಕ್ಕೆ ಒಳ್ಳೆ ಕೆಲಸ ಮಾಡಿ, ಆಗ ನಾವೆಲ್ಲ ನಿಮ್ಮನ್ನು ಸ್ವಾಮೀಜಿಗಳಾಗಿ ಸ್ವೀಕರಿಸುತ್ತೇವೆ. ನಮಗೇಕೋ ನೀವು ನಮ್ಮ ಸಮಾಜದವರೋ ಅಥವಾ ಅಲ್ಲವೋ ಎಂಬ ಅನುಮಾನವಿದೆ. ದಯವಿಟ್ಟು ಇದನ್ನು ಇಲ್ಲಿಗೆ ನಿಲ್ಲಿಸಿ, ಏನೇ ಸಮಸ್ಯೆ ಇದ್ದಲ್ಲಿ ಮಠದಲ್ಲಿ ಕೂತು ಬಗೆಹರಿಸಿಕೊಳ್ಳೋಣ ಎಂದು ಹೇಳಿದರು.

Leave a Reply

Your email address will not be published. Required fields are marked *