
ಶಾಸಕ ಧೀರಜ್ ಮುನಿರಾಜ್ ಹುಟ್ಟುಹಬ್ಬದ ಪ್ರಯುಕ್ತ, ಕರ್ನಾಟಕ ರಾಜ್ಯ ಅಮೇಚೂರ್ ಕಬಡ್ಡಿ ಅಸೋಸಿಯೇಷನ್, ಬೆಂಗಳೂರು ಗ್ರಾಮಾಂತರ ಜಿಲ್ಲಾ ಅಮೇಚೂರ್ ಕಬಡ್ಡಿ ಅಸೋಸಿಯೇಷನ್, ಧೀರಜ್ ಮುನಿರಾಜ್ ಬ್ರಿಗೇಡ್ ಇವರ ಸಂಯುಕ್ತಾಶ್ರಯದಲ್ಲಿ ಅಂಜನಾದ್ರಿ ಕಪ್-2025, ಕರ್ನಾಟಕ ರಾಜ್ಯ ಮಟ್ಟದ ಪುರುಷರ ಕಬಡ್ಡಿ ಚಾಂಪಿಯನ್ ಶಿಪ್ -2025 ಪಂದ್ಯಾವಳಿಯನ್ನು ಇಂದಿನಿಂದ ಅಂದರೆ ಜ.6ರಿಂದ 8ರವರೆಗೆ ತಾಲೂಕಿನ ಖಾಸ್ ಬಾಗ್ ನ ಶ್ರೀ ಆಂಜನೇಯಸ್ವಾಮಿ ದೇವಾಯಲದ ಸಮೀಪದಲ್ಲಿ ಆಯೋಜನೆ ಮಾಡಲಾಗಿದೆ.
ಕಬಡ್ಡಿ ಪಂದ್ಯಾವಳಿಯಲ್ಲಿ ಸುಮಾರು 26 ಜಿಲ್ಲೆಯಗಳ ತಂಡಗಳು ಭಾಗವಹಿಸಲಿವೆ. ಇಂದು ಸಂಜೆ 6ಗಂಟೆಗೆ ಪಂದ್ಯಾವಳಿಗಳು ಪ್ರಾರಂಭವಾಗಲಿವೆ. ಇಂದಿನ ಕಾರ್ಯಕ್ರಮವನ್ನು ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಉದ್ಘಾಟಿಸಲಿದ್ದಾರೆ ಎಂದು ಮಧುರೆ ಗ್ರಾಮ ಪಂಚಾಯಿತಿ ಸದಸ್ಯ, ಕಾರ್ಯಕ್ರಮದ ಆಯೋಜನ ಆರ್.ಆನಂದ ಮೂರ್ತಿ ತಿಳಿಸಿದರು.
ಪ್ರಥಮ ಬಹುಮಾನವಾಗಿ 1ಲಕ್ಷದ 101ರೂ. ನೀಡಲಾಗುವುದು. ಪಂದ್ಯಾವಳಿಗೆ ಈಗಾಗಲೇ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ…