
ರಾಗಿ ಹುಲ್ಲು ತುಂಬಿದ್ದ ಕ್ಯಾಂಟರ್ ಗೆ ವಿದ್ಯುತ್ ಲೈನ್ ಸ್ಪರ್ಶವಾಗಿದ್ದು, ವಿದ್ಯುತ್ ಲೈನ್ ತಗುಲಿದ ಹಿನ್ನೆಲೆ ರಾಗಿ ಹುಲ್ಲಿಗೆ ಬೆಂಕಿ ಆವರಿಸಿ ಹೊತ್ತಿ ಉರಿದಿದೆ.
ಘಟನೆ ಭಕ್ತರಹಳ್ಳಿ ಗ್ರಾಮದಲ್ಲಿ ನಡೆದಿದೆ…
ಭಕ್ತರಹಳ್ಳಿಯಿಂದ ವಿಜಯಪುರಕ್ಕೆ ಲಾರಿಯಲ್ಲಿ ಹುಲ್ಲು ಸಾಗಿಸುವ ವೇಳೆ ವಿದ್ಯುತ್ ತಂತಿ ಸ್ಪರ್ಶಿಸಿ ಬೆಂಕಿ ಹೊತ್ತಿಕೊಂಡಿದೆ. ಲಾರಿಯಲ್ಲಿದ್ದ 250 ಹೊರೆ ಹುಲ್ಲು ಸಂಪೂರ್ಣ ಬೂದಿಯಾಗಿದೆ.
ಪಕ್ಕದಲ್ಲೇ ಇದ್ದ ರೈತರ ಹುಲ್ಲಿನ ಬಣವೆಗೂ ಬೆಂಕಿ ಆವರಿಸಿದೆ. ಗ್ರಾಮಸ್ಥರಿಂದ ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದರು.
ಅಗ್ನಿಶಾಮಕ ಸಿಬ್ಬಂದಿ ಬರುವುದು ತಡವಾದ ಹಿನ್ನೆಲೆ ಗ್ರಾಮಸ್ಥರಿಂದಲೇ ಬೆಂಕಿ ನಂದಿಸುವ ಯತ್ನ ನಡೆದಿದೆ.
ಮನೆಯಲ್ಲಿದ್ದ ನೀರನೆಲ್ಲಾ ತಂದು ಹಾಕಿದರೂ ಬೆಂಕಿ ನಂದಿಸಲು ಅಸಾಧ್ಯವಾಗಿತ್ತು.
ಅದೃಷ್ಟವಶಾತ್ ಲಾರಿ ಚಾಲಕ ಮತ್ತು ಕ್ಲೀನರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ದೊಡ್ಡಬೆಳವಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.