
ದೊಡ್ಡಬಳ್ಳಾಪುರ ತಾಲ್ಲೂಕಿನ ಶ್ರೀ ಕ್ಷೇತ್ರ ಎಸ್.ಎಸ್ ಘಾಟಿಯಲ್ಲಿ ಶ್ರೀ ಘಾಟಿ ಸುಬ್ರಹ್ಮಣ್ಯೇಶ್ವರ ಸ್ವಾಮಿ ದೇವಸ್ಥಾನದ ಬ್ರಹ್ಮರಥೋತ್ಸವ ಕಾರ್ಯಕ್ರಮಕ್ಕೆ ಆಹಾರ ನಾಗರಿಕ ಸರಬರಾಜು, ಗ್ರಾಹಕ ವ್ಯವಹಾರಗಳ ಸಚಿವರು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಹೆಚ್ ಮುನಿಯಪ್ಪ ಅವರು ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಸಚಿವ ಕೆ.ಹೆಚ್ ಮುನಿಯಪ್ಪನವರ ಮಗ ಐಆರ್ ಎಸ್ ಅಧಿಕಾರಿ ನರಸಿಂಹರಾಜು, ಸೊಸೆ ಶೃತಿಶ್ರೀ, ಮಗಳು ಡಾ.ಜ್ಞಾನೇಶ್ವರಿ, ಅಳಿಯ ಡಾ.ಜಯ್ ಕುಮಾರ್, ಕಾಂಗ್ರೆಸ್ ಮುಖಂಡ ಹಾಗೂ ವಕೀಲ ಆರ್.ವಿ.ಮಹೇಶ್ಕುಮಾರ್, ವಕೀಲ ಆರ್.ವಿ ಶಿವಕುಮಾರ್, ತೂಬಗೆರೆ ಕಾಂಗ್ರೆಸ್ ಸಮಿತಿ ರಂಗಪ್ಪ. ಮುನಿರಾಜು. ರವಿಸಿದ್ದಪ್ಪ. ಚಿದಾನಂದ. ಅಂಜಿನಪ್ಪ. ಗೋಪಾಲ್ ನಾಯಕ್. ಗಂಗಸಂದ್ರ ಶ್ರೀಧರ್ ಹಾಜರಿದ್ದರು.