ರಾಜ್ಯ ಸರ್ಕಾರದ ಬಸ್ ದರ ಏರಿಕೆ ಆದೇಶ ವಾಪಸ್ಸು ಪಡೆಯುವಂತೆ ಡಾ.ಕೆ.ನಾಗರಾಜ್ ಒತ್ತಾಯ

ಕೋಲಾರ: ರಾಜ್ಯ ಸರ್ಕಾರವು ಶೇ 15 ರಷ್ಟು ಬಸ್ ದರ ಹೆಚ್ಚಳ ಮಾಡಿ ಸಾಮಾನ್ಯ ಜನರ ಜೇಬಿಗೆ ಕತ್ತರಿ ಹಾಕಿದೆ ಕೂಡಲೇ ಬಸ್ ದರ ಹೆಚ್ಚಳ ಆದೇಶವನ್ನು ವಾಪಸ್ಸು ಪಡೆದು ಸಾಮಾನ್ಯ ಜನರನ್ನು ರಕ್ಷಣೆ ಮಾಡುವಂತೆ ಜೆಡಿಯು ಪಕ್ಷದ ಯುವ ಘಟಕದ ರಾಜ್ಯಾಧ್ಯಕ್ಷ ಹಾಗೂ ಆಗ್ನೇಯ ಪದವೀಧರ ಕ್ಷೇತ್ರದ ಅಭ್ಯರ್ಥಿ ಕಲ್ಲಂಡೂರು ಡಾ.ಕೆ ನಾಗರಾಜ್ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಸರ್ಕಾರವನ್ನು ಪತ್ರಿಕಾ ಹೇಳಿಕೆ ಮೂಲಕ ಒತ್ತಾಯಿಸಿದ ಅವರು ರಾಜ್ಯದ ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕಾಗಿ ಗ್ಯಾರಂಟಿ ಯೋಜನೆಗಳನ್ನು ಮುಂದೆ ತಂದು ಜನರನ್ನು ಯಾಮಾರಿಸಿದ್ದಾರೆ ಅಧಿಕಾರಕ್ಕೆ ಬಂದ ನಂತರ ಒಂದರ ಮೇಲೊಂದರಂತೆ ವಸ್ತುಗಳ ಬೆಲೆ ಹೆಚ್ಚಳ ಮಾಡುವ ಮೂಲಕ ಸಾಮಾನ್ಯ ಜನರ ಜೀವನಕ್ಕೆ ತೊಂದರೆಯಾಗಿದೆ ಶಕ್ತಿ ಯೋಜನೆಯಲ್ಲಿ ಮಹಿಳೆಯರಿಗೆ ಉಚಿತವಾಗಿ ಎಂದು ಹೇಳಿ ಪುರುಷರಿಗೆ ಅದರ ಹೊರೆ ಹೆಚ್ಚಿಸಿದರು ಇದೀಗ ಮತ್ತೆ ಶೇ.15ರಷ್ಟು ಬಸ್‌‍ ಪ್ರಯಾಣ ದರ ಏರಿಸುವ ಮೂಲಕ ಸಾರಿಗೆ ವ್ಯವಸ್ಥೆಯನ್ನೇ ಆಶ್ರಯಿಸಿರುವ ಸಾಮಾನ್ಯ ಜನರಿಗೆ ಬರೆ ಎಳೆದಿದ್ದಾರೆ ಕಾಂಗ್ರೆಸ್‌‍ ಸರ್ಕಾರದ ಈ ನಿರ್ಧಾರವು ಅವೈಜ್ಞಾನಿಕ ಹಾಗೂ ಜನವಿರೋಧಿಯಾಗಿದ್ದು ಕೂಡಲೇ ಈ ಆದೇಶವನ್ನು ವಾಪಸ್ಸು ಪಡೆಯಬೇಕು ಎಂದು ಒತ್ತಾಯಿಸಿದರು.

ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದ ದಿನದಿಂದ ಬೆಲೆ ಏರಿಕೆ, ತೆರಿಗೆ ಹೆಚ್ಚಳ ಅಂತ ಒಂದಲ್ಲ ಒಂದು ರೀತಿ ಜನ ಸಾಮಾನ್ಯರ ಹಣಕ್ಕೆ ಕತ್ತರಿ ಹಾಕಿದ್ದಾರೆ ಪೆಟ್ರೋಲ್‌ ಡೀಸೆಲ್‌ ದರ ಏರಿಕೆ ಅನಿವಾರ್ಯ ಎಂಬಂತೆ, ಆಸ್ತಿ ತೆರಿಗೆ ಏರಿಕೆ, ಮುದ್ರಾಂಕ ದರ ಏರಿಕೆ, ನೀರಿನ ದರ ಏರಿಕೆ, ಜನನ ಮರಣ ಪ್ರಮಾಣಪತ್ರ ಶುಲ್ಕ ಏರಿಕೆ, ಹಾಲಿನ ದರ ಏರಿಕೆ ಅನಿವಾರ್ಯ ಎಂದು ಸಮರ್ಥನೆ ಮಾಡಿಕೊಂಡ ಸರ್ಕಾರವು ಇವಾಗ ಬಸ್‌‍ ದರ ಏರಿಕೆ ಮಾಡಿದ್ದಾರೆ ಜನರು ಕಾಂಗ್ರೆಸ್‌‍ ಸರ್ಕಾರದ ವಿರುದ್ಧ ಪ್ರತಿಭಟನೆ ಅನಿವಾರ್ಯವಾಗ ಬೇಕಾಗುತ್ತದೆ ಎಂದು ಸರ್ಕಾರವನ್ನು ಎಚ್ಚರಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರದಲ್ಲಿ ಖಜಾನೆಯಲ್ಲಿ ಹಣ ಖಾಲಿಯಾಗಿದೆ ಎಂದು ತಮ್ಮ ಪಕ್ಷದವರೇ ಹೇಳಿದ್ದು ಬಸ್ ದರ ಏರಿಕೆಯಿಂದ ಸಾಬೀತಾಗಿದೆ ದುಡಿಯುವ ಜನರಿಗೆ ದಿನನಿತ್ಯದ ಬೆಲೆ ಏರಿಕೆಗಳು ಸರ್ಕಾರದ ಹೊಸ ಗ್ಯಾರಂಟಿ ಯೋಜನೆಯಾಗಿದೆ ಸರಕಾರ ಜನರಿಗೆ ತೊಂದರೆ ಕೊಡುವುದನ್ನು ಬಿಟ್ಟು ಸಾಮಾನ್ಯ ಜನರ ಏಳಿಗೆಗಾಗಿ ಹಾಗೂ ಚುನಾವಣೆಯ ಪೂರ್ವದಲ್ಲಿ ಕೊಟ್ಟು ಭರವಸೆಗಳನ್ನು ಜಾರಿ ಮಾಡಲು ಮುಂದಾಗುವಂತೆ ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದರು.

Leave a Reply

Your email address will not be published. Required fields are marked *

error: Content is protected !!