
ಕೋಲಾರ: ಡಾ.ಬಿ.ಆರ್. ಅಂಬೇಡ್ಕರ್ ಅವರಿಗೆ ಅವಹೇಳನ ಮಾಡಿರುವ ಕೇಂದ್ರದ ಗೃಹ ಮಂತ್ರಿ ಅಮಿತ್ ಶಾ ವಿರುದ್ಧ ಜ.3 ರಂದು ಶುಕ್ರವಾರ ಪ್ರಗತಿಪರ ಮತ್ತು ದಲಿತ ಸಂಘಟನೆಗಳು ಕರೆ ನೀಡಿರುವ ಕೋಲಾರ ಬಂದ್ ಗೆ ಜಿಲ್ಲಾ ಕಾಂಗ್ರೆಸ್ ಪಕ್ಷವು ಬೆಂಬಲಿಸಲಿದೆ ಎಂದು ಕಾಂಗ್ರೆಸ್ ಪಕ್ಷದ ಜಿಲ್ಲಾ ಅಧ್ಯಕ್ಷ ಸಿ.ಲಕ್ಷ್ಮೀನಾರಾಯಣ್ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು
ದೇಶದಲ್ಲಿ ಬಿಜೆಪಿ ಪಕ್ಷದ ಸರ್ವಾಧಿಕಾರಿ ದೋರಣೆ ಹೆಚ್ಚಾಗಿದೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನ ಇದೆಯೋ ಇಲ್ಲವೋ ಎಂಬ ಅನುಮಾನ ಮೂಡಿದೆ. ಅಂಬೇಡ್ಕರ್ ಬಗ್ಗೆ ತುಚ್ಛವಾಗಿ ಮಾತನಾಡಿರುವ ಶಾ ದೇಶ ತಲೆ ತಗ್ಗಿಸುವ ರೀತಿ ವರ್ತಿಸಿದ್ದಾರೆ ದೇಶಕ್ಕೆ ಸ್ವಾತಂತ್ರ್ಯ ತರುವಲ್ಲಿ ಮಹಾತ್ಮ ಗಾಂಧಿಯವರ ಅಷ್ಟೇ ಸಾಮಾಜಿಕ ನ್ಯಾಯದ ಅಡಿಯಲ್ಲಿ ಸಂವಿಧಾನ ರಚನೆಕಾರ ಅಂಬೇಡ್ಕರ್ ಕೂಡ ಪ್ರಮುಖವಾಗಿದ್ದಾರೆ ಅಂತಹ ಬಗ್ಗೆ ಅವಹೇಳನ ಖಂಡನೀಯ ನಡೆ ನುಡಿ ಸರಿ ಇಲ್ಲದ ಬಿಜೆಪಿಯವರು ಸಂವಿಧಾನ ವಿರೋಧಿಗಳು ಎಂದು ಆರೋಪಿಸಿದರು.
ದೇಶದಲ್ಲಿ ಭಾಷೆ ಭಾಷೆ ನಡುವೆ ಕೋಮುಗಲಭೆಯ ಗಲಾಟೆಗಳು ಬಿಜೆಪಿಗೆ ಮುಖ್ಯವಾಗಿದೆ ಜನರ ಮನಸ್ಸುಗಳ ನಡುವೆ ತಂದಿಡುವ ಕೆಲಸ ಮಾಡುತ್ತಿದ್ದಾರೆ. ದೇಶವನ್ನು ಶಾಂತವಾಗಿ ನಡೆಸುವ ಶಕ್ತಿ ಇವರಿಗೆ ಇಲ್ಲ ಅಧಿಕಾರ ನಡೆಸಲು ಅವರು ಅನರ್ಹರು. ಅಮಿತ್ ಶಾ ನಾಯಕ ಅಲ್ಲ ಮೋದಿ ಹಾಗೂ ಕಾರ್ಪೊರೇಟ್ ಸಂಸ್ಥೆಗಳ ನಡುವಿನ ಏಜೆಂಟ್ ಆಗಿದ್ದಾರೆ ಪ್ರಜಾಪ್ರಭುತ್ವ ದೇಗುವವಾದ ಸಂಸತ್ತು ಉದ್ವಾಟನೆಗೆ ರಾಷ್ಟ್ರಪತಿಗಳಿಗೆ ಆಹ್ವಾನ ಕೊಟ್ಟಿಲ್ಲ ಇಂತಹ ಸರಕಾರದ ವಿರುದ್ದ ನಡೆಯಲಿರುವ ಬಂದ್ ಗೆ ಕಾಂಗ್ರೆಸ್ ಸಂಪೂರ್ಣ ಬೆಂಬಲ ನೀಡಲಿದೆ ಎಂದರು.
ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಊರುಬಾಗಿಲು ಶ್ರೀನಿವಾಸ್ ಮಾತನಾಡಿ ಪ್ರಗತಿಪರ ಸಂಘಟನೆಗಳು ಬಂದ್ ಗೆ ಕರೆ ಕೊಟ್ಟಿದ್ದು ಜಿಲ್ಲಾ ಕಾಂಗ್ರೆಸ್ ನಿಂದ ಬೆಂಬಲ ಇರಲಿದೆನಾವು ಬೀದಿಗಳಲ್ಲಿ ತಿರುಗಾಡುತ್ತೇವೆ. ಶಾಂತಿಯುತವಾಗಿ ಬಂದ್ ಆಚರಣೆ ಮಾಡತ್ತೇವೆ ಸಂವಿಧಾನ ವಿರೋಧಿ ಅಮಿತ್ ಶಾ ಮೇಲೆ ಇಡೀ ಜನ ಆಕ್ರೋಶಗೊಂಡಿದ್ದಾರೆ. ಈ ಬಂದ್ ಗೆ ಪಕ್ಷಾತೀತ ಹಾಗೂ ಜಾತ್ಯತೀತವಾಗಿ ಸಹಕರಿಸಬೇಕು ಎಂದು ಮನವಿ ಮಾಡಿದರು
ಕೋಲಾರ ಜಿಲ್ಲೆಯ ಜನತೆಗೆ ಹೊಸ ವರ್ಷದ ಸಂದರ್ಭದಲ್ಲಿ ಶುಭ ಸುದ್ದಿಯಾಗಿದ್ದು
ವೇಮಗಲ್ ನಿಂದ ಕೋಲಾರ ವರಗೆ ಆರು
ಪಥದ ರಸ್ತೆ ನಿರ್ಮಾಣವಾಗಲಿದ್ದು ಕೈಗಾರಿಕಾ ಕಾರಿಡಾರ್ ಗೆ ಸಂಪರ್ಕ ಒದಗಿಸಲಿದೆ ಇದಕ್ಕೆ ಈಗಾಗಲೇ ಸಚಿವರಾದ ಕೆ.ಎಚ್. ಮುನಿಯಪ್ಪ ಹಾಗೂ ಸತೀಶ್ ಜಾರಕಿಹೊಳಿ ಸಹ ಅನುಮೋದನೆ ಸಿದ್ದರಾಗಿದ್ದಾರೆ ಎಂದು ತಿಳಿಸಿದರು
ಈ ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಪಕ್ಷದ ಗ್ರಾಮಾಂತರ ಬ್ಲಾಕ್ ಅಧ್ಯಕ್ಷ ಉದಯಶಂಕರ್, ಒಬಿಸಿ ಘಟಕದ ರಾಜ್ಯ ಉಪಾಧ್ಯಕ್ಷ ಓಬಿಸಿ ಮಂಜುನಾಥ್, ಪದವೀಧರ ಘಟಕದ ಜಿಲ್ಲಾ ಅಧ್ಯಕ್ಷ ಟಿ.ಎಸ್ ಸುಧೀರ್, ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಸೋಮಶೇಖರ್, ಮುಖಂಡರಾದ ನಾಗರಾಜ್, ಲಾಲ್ ಬಹಾದ್ದೂರ್ ಶಾಸ್ತ್ರಿ, ಮಂಜುನಾಥ್, ನವೀನ್ ಇದ್ದರು.