
ದೊಡ್ಡಬಳ್ಳಾಪುರ: ನಗರದಲ್ಲಿನ ವೀರಶೈವ ಲಿಂಗಾಯಿತ ಪತ್ತಿನ ಸಹಕಾರ ಸಂಘದ ಐದು ವರ್ಷಗಳ ಆಡಳಿತ ಮಂಡಳಿ ನಿರ್ದೇಶಕ ಸ್ಥಾನದ ಚುನಾವಣೆಗೆ ನಾಮ ಪತ್ರ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಿದ್ದು, ಜ.2 ರಂದು ಮಧ್ಯಾಹ್ನ 1 ಗಂಟೆವರೆಗೆ ನಾಮ ಪತ್ರಗಳನ್ನು ಸಲ್ಲಿಸಲು ಕೊನೆಯದಿನವಾಗಿದೆ.
ನಾಮ ಪತ್ರಗಳ ಪರಿಶೀಲನೆ ಜ.3 ರಂದು ನಡೆಯಲಿದೆ. ನಾಮ ಪತ್ರಗಳನ್ನು ಹಿಂದಕ್ಕೆ ಪಡೆಯಲು ಜ.4 ರಂದು ಮಧ್ಯಾಹ್ನ 3 ಗಂಟೆವರೆಗೆ ಅವಕಾಶ ಇದೆ.
ಅಗತ್ಯ ಬಿದ್ದರೆ ಚುನಾವಣೆಯು ಜ.9 ರಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ ಸಂಘದ ಆವರಣದಲ್ಲಿ ನಡೆಯಲಿದೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.