
ಕೆಟಿಎಂ ಬೈಕ್ ಹಾಗೂ ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾಗಿರುವ ಘಟನೆ ತಾಲೂಕಿನ ವೀರಾಪುರ- ಮಜರಾಹೊಸಹಳ್ಳಿ ಮಾರ್ಗಮಧ್ಯೆ ನಡೆದಿದೆ.
ವೀರಾಪುರ- ಮಜರಾಹೊಸಹಳ್ಳಿ ಮಾರ್ಗಮಧ್ಯೆ ತಿರುವು ಇದ್ದು, ಇಲ್ಲಿ ಯಾವುದೇ ಮುನ್ನೆಚ್ಚರಿಕಾ ಫಲಕಗಳನ್ನು ಅಳವಡಿಸಿರುವುದಿಲ್ಲ. ಕೂಡಲೇ ತಿರುವಿನಲ್ಲಿ ಮುನ್ನೆಚ್ಚರಿಕಾ ಸೂಚನಾ ಫಲಕಗಳನ್ನು ಅಳವಡಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಬೈಕ್ ಸವಾರ ತಲೆಗೆ ಹೆಲ್ಮೆಟ್ ಧರಿಸಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎನ್ನಲಾಗಿದೆ.
ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ…

ಡಿಕ್ಕಿ ರಭಸಕ್ಕೆ ಬೈಕ್ ಹಾಗೂ ಕಾರಿನ ಮುಂಭಾಗ ಜಖಂಗೊಂಡಿದೆ…