
ನೆಚ್ಚಿನ ಶ್ವಾನ ಸಾವು ಹಿನ್ನೆಲೆ ಮನನೊಂದ ಯುವಕ ನೇಣಿಗೆ ಶರಣಾಗಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ಹೆಗ್ಗಡದೇವನಪುರ ಗ್ರಾಮದಲ್ಲಿ ನಡೆದಿದೆ.
ರಾಜಶೇಖರ್ (35) ಮೃತ ಯುವಕ.
ಒಂಭತ್ತು ವರ್ಷದಿಂದ ಸಾಕಿದ್ದ ಪ್ರೀತಿಯ ಶ್ವಾನ ನಿನ್ನೆ ಸಾವನ್ನಪ್ಪಿದೆ. ಶ್ವಾನದ ಮೇಲಿನ ಪ್ರೀತಿ ಹಿನ್ನೆಲೆ ಮನನೊಂದು ಆತ್ಮಹತ್ಯೆ ಶಂಕೆ ವ್ಯಕ್ತವಾಗಿದೆ.
ಇಂದು ಮನೆಯಲ್ಲಿ ರಾಜಶೇಖರ್ ಮನನೊಂದು ನೇಣಿಗೆ ಶರಣಾಗಿದ್ದಾನೆ ಎಂದು ತಿಳಿದುಬಂದಿದೆ.
ಮೃತ ಯುವಕ ರಾಜಶೇಖರ್ ನೆಟ್ ವರ್ಕ್ ಮಾರ್ಕೆಟಿಂಗ್ ನಲ್ಲಿ ಕೆಲಸ ಮಾಡುತ್ತಿದ್ದ.
ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ನಡೆದಿದೆ.