ದೊಡ್ಡಬೆಳವಂಗಲದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಗುರುವಂದನಾ ಮತ್ತು ಸ್ನೇಹ ಸಂಗಮ ಕಾರ್ಯಕ್ರಮ

 ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಹಳೇ ವಿದ್ಯಾರ್ಥಿಗಳ ಸಮಾಗಮವಾಗಿದ್ದು, 2000-2001ರಲ್ಲಿ ಎಸ್‌ಎಸ್‌ಎಲ್‌ಸಿ ಮುಗಿಸಿದ ವಿದ್ಯಾರ್ಥಿಗಳು 24 ವರ್ಷದ ಬಳಿಕ ಗುರುವಂದನಾ ಮತ್ತು ಸ್ನೇಹ ಸಂಗಮ ಕಾರ್ಯಕ್ರಮ ನಡೆಸಿರುವುದು ಖುಷಿಯ ಸಂಗತಿ ಎಂದು ಶಿಕ್ಷಕ ಕೆ.ವಿ.ಶಿವರಾಮೇಗೌಡ ಹೇಳಿದರು.

ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಹಳೇ ವಿದ್ಯಾರ್ಥಿಗಳಿಂದ ನಡೆದ ಗುರುವಂದನಾ ಮತ್ತು ಸ್ನೇಹ ಸಂಗಮ ಕಾರ್ಯಕ್ರಮದಲ್ಲಿ ಭಾಗಿಯಾಗಿ ಅವರು ಮಾತನಾಡಿದರು.

ಹಿಂದಿನ ಕಾಲದಲ್ಲಿ ವಿದ್ಯಾರ್ಥಿಗಳನ್ನು ದಂಡಿಸುತ್ತಿದ್ದೆವು ಆದರೆ, ಈಗ ದಂಡನೆಯೂ ಇಲ್ಲ ಶಿಕ್ಷಣವು ಇಲ್ಲದಂತಾಗಿದೆ.  ಮಕ್ಕಳನ್ನು ದಂಡಿಸಿದರೆ ಪೋಷಕರು ಬಂದು ನಮ್ಮ ಬಳಿ ಗಲಾಟೆ ಮಾಡಿ, ಬೈಯ್ಯುತ್ತಾರೆ. ಮಕ್ಕಳಿಗೆ ಯಾಕೆ ಹೊಡೆದೆ ಎಂದು ನಮ್ಮ ವಿರುದ್ಧ ದೂರು ಕೊಡುತ್ತಾರೆ. ಇಂದಿನ ಕಾಲದಲ್ಲಿ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವಾಗುತ್ತಿಲ್ಲ. ಗದರಿದರೆ ಸಾಕು ಮಕ್ಕಳೇ ಈಗ ದೂರು ನೀಡುತ್ತಾರೆ ಇನ್ನ ಅವರು ಪೋಷಕರು ಅವರಿಗೆ ಬೆಂಬಲ ನೀಡುತ್ತಾರೆ. ಹಿಂದಿನ ಕಾಲದಲ್ಲಿ ಪೋಷಕರೆ ಬಂದು ಅವರಿಗೆ ಹೊಡೆದು ಬುದ್ಧಿ ಕಲಿಸಿ ಉತ್ತಮ ಶಿಕ್ಷಣ ನೀಡಿ ಎಂದು ಹೇಳುತ್ತಿದ್ದರು ಆದರೆ ಈಗ ಅದೆಲ್ಲವೂ ವಿರುದ್ಧವಾಗಿದೆ ಶಿಕ್ಷಣದ ನಿಯಮಗಳು ಬದಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರು, 80ಕ್ಕೂ ಹೆಚ್ಚು ಹಳೇ ವಿದ್ಯಾರ್ಥಿಗಳು ಭಾಗಿಯಾಗಿದ್ದರು. ಈ ವೇಳೆ ತಮ್ಮ ಶಿಕ್ಷಕರ ಜೊತೆಗೂಡಿ ತಮ್ಮ ಕಲಿಕೆಯ ದಿನಗಳ ಹಲವು ಸವಿನೆನಪುಗಳನ್ನು ಹಂಚಿಕೊಂಡರು.

ಶಿಕ್ಷಕರು ತಮ್ಮ ಮಕ್ಕಳ ಜೊತೆ ಒಡನಾಟ, ಕಲಿಕೆ ಬಗ್ಗೆ ಮಾತನಾಡಿದರು. ದಿನವೀಡಿ ಹಾಡು, ಹರಟೆ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನ ಮಾಡಿ ಖುಷಿ ಪಟ್ಟರು.

ಕಾರ್ಯಕ್ರಮದಲ್ಲಿ 24 ವರ್ಷಗಳ ಹಿಂದೆ ಕಲಿಸಿದ ಶಿಕ್ಷಕರಾದ ಜಿ.ನಾರಾಯಣಪ್ಪ, ಡಿ.ಎಂ.ಕೃಷ್ಣಮೂರ್ತಿ, ಆರ್.ಮಂಜು ರಾಜ್, ಹೆಚ್.ಸಿ. ಲಿಂಗಣ್ಣಯ್ಯ , ಎಂ.ಮಂಜುನಾಥ್, ಎನ್.ಪಿ.ಸುರೇಂದ್ರಬಾಬು, ಸವಿತಾ ಜಿ ನಾಯಕ್, ಮುನಿರತ್ನಮ್ಮ, ಜಿ.ಸಿ.ವೀರಕ್ಯಾತಯ್ಯ, ಬಿರಾದರ್ ಸಾಹೇಬ್ ಗೌಡರನ್ನು ಸನ್ಮಾನಿಸಲಾಯಿತು.

Leave a Reply

Your email address will not be published. Required fields are marked *

error: Content is protected !!