ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ ಪಡೆಯಲು ಹೊರಟ “ಬಸಪ್ಪ”

ತಾಲೂಕಿನ ಪೆರಮಗೊಂಡನಹಳ್ಳಿ ಗ್ರಾಮದಲ್ಲಿರುವ ದಿನ್ನೆ ಆಂಜನೇಯಸ್ವಾಮಿ ದೇವಾಲಯದಿಂದ ಕೇರಳದ ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ ಪಡೆಯಲು “ಬಸಪ್ಪ” ಎಂದೇ ಹೆಸರು ಪಡೆದಿರುವ ಎತ್ತು ಡಿ.22ರ  ಭಾನುವಾರದಂದು ಪಯಣ ಬೆಳೆಸಿತು.

ಇತ್ತೀಚೆಗೆ ಈ ಬಸಪ್ಪ ದೊಡ್ಡಬಳ್ಳಾಪುರದಿಂದ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿನ ರಾಮನ ದರ್ಶನ ಪಡೆದು ಬಂದಿತ್ತು. ಇದೀಗ ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ ಪಡೆಯಲು ಪಯಣ ಬೆಳೆಸಿದೆ.

ಬಸಪ್ಪನ ಪ್ರಯಾಣಕ್ಕಾಗಿಯೇ ಪ್ರತ್ಯೇಕವಾಗಿ ಬಸ್ಸೊಂದನ್ನು ತಯಾರು ಮಾಡಿಸಲಾಗಿದೆ. ಬಸಪ್ಪನಿಗೆ ಅಯ್ಯಪ್ಪ ಸ್ವಾಮಿ ದರ್ಶನ ಮಾಡಿಸಲು ವಾಸುದೇವಾ ಚಾರ್ ಅವರು ಜವಾಬ್ದಾರಿ ಹೊತ್ತಿದ್ದು, ಈಗಾಗಲೇ ಇದಕ್ಕೆ ಸಕಲ ಸಿದ್ಧತೆ ನಡೆಸಲಾಗಿದೆ.

ನಿನ್ನೆ (ಡಿ.22) ದಿನ್ನೆ ಆಂಜನೇಯ ಸ್ವಾಮಿ ದೇವಾಲಯದಲ್ಲಿ ವಾಸುದೇವಾ ಚಾರ್ ನೇತೃತ್ವದಲ್ಲಿ ಅಯ್ಯಪ್ಪ ಸ್ವಾಮಿ ಭಜನೆ ಹಾಗೂ ಇತರೆ ಎಲ್ಲಾ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿ ಬಸಪ್ಪನ ಯಾತ್ರೆಗೆ ಚಾಲನೆ ನೀಡಲಾಯಿತು.

ಚಾಲನೆ ನೀಡಿ ಮಾಧ್ಯಮದವರೊಂದಿಗೆ ಮಾತನಾಡಿದ ವಾಸುದೇವಾ ಚಾರ್, ಇದೇ ಮೊದಲ ಬಾರಿಗೆ ಅಯೋಧ್ಯೆ ರಾಮನ ದರ್ಶನಕ್ಕಾಗಿ ದಿನ್ನೆ ಆಂಜನೇಯ ಸ್ವಾಮಿಯ ಪ್ರತ್ಯಂಗಿರ ಮಹಾಕಾಳಿ ಬಸಪ್ಪ‌ ಎಂಬ ಹೆಸರಿನಲ್ಲಿರುವ ಎತ್ತು ಹೊರಟಿತ್ತು. ಇದೀಗ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವರ ದರ್ಶನ ಪಡೆಯಲು ಹೊರಟಿದೆ. ಪಂಪಾ ನದಿಯಲ್ಲಿ ಬಸಪ್ಪನಿಗೆ ಗಂಗಾ ಸ್ನಾನ ಮಾಡಿಸಿ ಅಯ್ಯಪ್ಪ ದರ್ಶನ ಮಾಡಿಸಲಾಗುವುದು. ಇದಕ್ಕೆ ಸಕಲ ಸಿದ್ಧತೆ ನಡೆಸಲಾಗಿದೆ ಎಂದು ಹೇಳಿದರು.

ಅಯ್ಯಪ್ಪ ದರ್ಶನ ನಂತರ ಮಾರ್ಗ ಮಾಧ್ಯ ಬರುವಂತಹ ಎಲ್ಲಾ ದೇವರ ದರ್ಶನ ಮಾಡಿಸಲಾಗುವುದು ಎಂದು ಹೇಳಿದರು.

ಇದಾದನಂತರ ಮುಂದಿನ ತೀರ್ಥಯಾತ್ರೆ ತಮಿಳುನಾಡಿನ ರಾಮೇಶ್ವರಂನತ್ತ ಹೊರಡಲಿದೆ. ಇದಕ್ಕೆ ಎಲ್ಲಾ ಸಿದ್ಧತೆ ಮುಂದಿನ ದಿನಗಳಲ್ಲಿ ನಡೆಸಲಾಗುವುದು ಎಂದು ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!