
ಸುಪ್ರಸಿದ್ಧ ಘಾಟಿ ಸುಬ್ರಹ್ಮಣ್ಯ ದನಗಳ ಜಾತ್ರೆ ಡಿ.20ರಿಂದ ಆರಂಭವಾಗಿದ್ದು, ದೂರದ ಊರುಗಳಿಂದ ಬರುವ ರೈತರ ರಾಸುಗಳಿಗೆ ಉಚಿತ ಮೇವು, ನೀರು ವಿತರಣೆ ಕಾರ್ಯಕ್ರಮವನ್ನು ನವ ಕರ್ನಾಟಕ ಯುವ ಶಕ್ತಿ ವೇದಿಕೆ ಆಯೋಜನೆ ಮಾಡಲಾಗಿದೆ ಎಂದು ವೇದಿಕೆ ಅಧ್ಯಕ್ಷ ಅಂಬರೀಶ್ ಹೇಳಿದರು.
ಘಾಟಿ ದನಗಳ ಜಾತ್ರೆಯಲ್ಲಿ ರಾಸುಗಳಿಗೆ ಉಚಿತವಾಗಿ ಮೇವು ಮತ್ತು ನೀರು ವಿತರಣೆ ಮಾಡಿ ಮಾತನಾಡಿದ ಅವರು, ಈ ಕಾರ್ಯಕ್ರಮ ಇನ್ನೂ ಮೂರು – ನಾಲ್ಕು ದಿನ ಮುಂದುವರಿಯುತ್ತದೆ. ಹೊರ ರಾಜ್ಯ ಹಾಗೂ ಜಿಲ್ಲೆಗಳ ರೈತರಿಗೆ ಮೊದಲ ಆದ್ಯತೆ ನೀಡಲು ತೀರ್ಮಾನಿಸಿ ಅದರಂತೆ ಮೇವು ನೀರು ನೀಡಲಾಗುತ್ತಿದೆ ಎಂದು ಹೇಳಿದರು.
ಇದರಿಂದ ರೈತರಿಗೆ ಬಹಳಷ್ಟು ಅನುಕೂಲವಾಗಿದೆ. ಇನ್ನೂ ರೈತರು ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕೆಂದು ಎಂದು ತಿಳಿಸಿದರು.
ಕೆಲವೆಡೆ ಅತಿವೃಷ್ಟಿ ಮತ್ತು ಕೆಲವೆಡೆ ಅನಾವೃಷ್ಟಿಯಿಂದ ಈ ವರ್ಷ ರೈತರು ತೀವ್ರ ನಷ್ಟದಲ್ಲಿದ್ದಾರೆ ಹಾಗೂ ಮೇವಿನ ಕೊರತೆ ಹೆಚ್ಚಾಗಿದೆ. ಇಂತಹ ಸಂದರ್ಭದಲ್ಲಿ ನವ ಕರ್ನಾಟಕ ಯುವಶಕ್ತಿ ವೇದಿಕೆ ಈ ಕಾರ್ಯಕ್ರಮ ಕೇವಲ ದಾನ ಕಾರ್ಯವಲ್ಲದೆ ರೈತ ಸಮುದಾಯವನ್ನು ಬೆಂಬಲಿಸುವ ಗುರಿ ಹೊಂದಲಾಗಿದೆ ಎಂದರು.