ರಸ್ತೆಯಲ್ಲಿ ಮಲವಿಸರ್ಜನೆ ಮಾಡುವ ಸಾಕುನಾಯಿಗಳಿಗೆ 1000 ರೂ.ದಂಡ ವಿಧಿಸಲಾಗುವುದು ಎಂದು ಹೈದರಾಬಾದ್ ನಲ್ಲಿ ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.
ಪೌರಾಡಳಿತ ಇಲಾಖೆ ಆಯುಕ್ತರು ಮತ್ತು ನಿರ್ದೇಶಕರಾದ ಶ್ರೀದೇವಿ ಅವರು ಪಾಲಿಕೆ ಹಾಗೂ ಇತರ ಪುರಸಭೆಯ ಪ್ರದೇಶಗಳಲ್ಲಿಯೂ ಈ ದಂಡವನ್ನು ಜಾರಿಗೊಳಿಸಲು ಆದೇಶ ಹೊರಡಿಸಿದ್ದಾರೆ.
ನಾಯಿ ಮಾಲೀಕರು ತಮ್ಮ ಸಾಕುಪ್ರಾಣಿಗಳನ್ನು ವಸತಿ ಪ್ರದೇಶಗಳು, ಉದ್ಯಾನವನಗಳು, ಬೀದಿಗಳು ಮತ್ತು ರಸ್ತೆಗಳಂತಹ ಸಾರ್ವಜನಿಕ ಸ್ಥಳಗಳಲ್ಲಿ ಮಲವಿಸರ್ಜನೆ ಮಾಡುವಂತೆ ಮಾಡಿದರೆ ಮತ್ತು ಮಲವಿಸರ್ಜನೆಯನ್ನು ತೆಗೆಯದಿದ್ದಲ್ಲಿ 1,000 ರೂಪಾಯಿಗಳವರೆಗೆ ದಂಡವನ್ನು ಪಾವತಿಸಬೇಕಾಗುತ್ತದೆ.