ಮೆಡಿಕವರ್ಡ್ ಫ್ಯಾಮಿಲಿ ಕಾರ್ಡ್ ಗೆ ಚಾಲನೆ‌ ನೀಡಿದ ಎಸಿಪಿ ರೀನಾ ಸುವರ್ಣ

ಬೆಂಗಳೂರು , ವೈಟ್‌ ಫೀಲ್ದ್‌ : ಮೆಡಿಕವರ್‌ ಆಸ್ಪತ್ರೆ ವತಿಯಿಂದ ಮೆಡಿಕವರ್ಡ್‌ ಅನ್ನೋ ಫ್ಯಾಮಿಲಿ ಕಾರ್ಡ್‌ ಅನ್ನು ಲಾಂಚ್‌ ಮಾಡಲಾಗಿದೆ . ವೈಟ್‌ ಫಿಲ್ದ್‌ ವಿಭಾಗದ ಎಸಿಪಿ ರೀನಾ ಸುವರ್ಣ ಅವರು ಮೆಡಿಕವರ್ಡ್‌ ಕಾರ್ಡ್‌ ಗೆ ಚಾಲನೆ ನೀಡಿದರು .

ಸಿಂಗಯ್ಯನಪಾಳ್ಯದಲ್ಲಿರುವ ಎಸಿಪಿ ಕಚೇರಿಯಲ್ಲಿ ಮೆಡಿಕವರ್ಡ್‌ ಫ್ಯಾಮಿಲಿ ಕಾರ್ಡ್‌ ಗೆ ಚಾಲನೆ ನೀಡಲಾಯ್ತು. ಮೆಡಿಕವರ್‌ ಆಸ್ಪತ್ರೆಯ ಮುಖ್ಯಸ್ಥ ನವೀನ್‌ ಎನ್‌ ಹಾಗೂ ಆಸ್ಪತ್ರೆಯ ಮಾರ್ಕೆಟಿಂಗ್‌ ವಿಭಾಗದ ಮುಖ್ಯಸ್ಥ ರೋಹಿತ್‌ ಶರ್ಮಾ ಭಾಗಿಯಾಗಿದ್ದರು .

ಮೆಡಿಕವರ್ಡ್‌ ಕಾರ್ಡ್‌ ನಿಂದ ಸಾಕಷ್ಟು ಉಪಯೋಗವಿದ್ದು, ಕಾರ್ಡ್‌ ಗೆ 500 ರೂ. ನೀಡಬೇಕಾಗಿದ್ದು, ಒಂದು ವರ್ಷ ವ್ಯಾರಂಟಿ ಇರಲಿದೆ. ಕಾರ್ಡ್‌ ರಿಜಿಸ್ಟ್ರರ್‌ ಮಾಡಿದವರ ವಿಳಾಸಕ್ಕೆ ಕಾರ್ಡ್‌ ಅನ್ನು ಕಳುಹಿಸಿಕೊಡಲಾಗುತ್ತದೆ. ಕಾರ್ಡ್‌ ನೋಂದಣಿ ಆದ 10 ದಿನಗಳಲ್ಲಿ ಮನೆಗಳಿಗೆ ಕಾರ್ಡ್‌ ಅನ್ನು ತಲುಪಿಲಾಗುತ್ತದೆ. ಕಾರ್ಡ್‌ ನ ಬಳಕೆದಾರರಿಗೆ ಶೇಕಡಾ 25 ರಿಂದ 50 ರಷ್ಟು ರಿಯಾಯತಿ ದರದಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಹತ್ತು ಕಿಲೊ ಮೀಟರ್‌ ವ್ಯಾಪ್ತಿಯಲ್ಲಿ ಉಚಿತ ಅಂಬ್ಯುಲೆನ್ಸ್‌ ಸರ್ವಿಸ್‌ ಕೂಡ ನೀಡಲಾಗುತ್ತದೆ.

Leave a Reply

Your email address will not be published. Required fields are marked *