ಅಕ್ರಮ ಮರಳು ಸಾಗಾಟ: ಟಿಪ್ಪರ್, ಜೆಸಿಬಿ ವಶ

ಗೌರಿಬಿದನೂರು ತಾಲೂಕಿನ ಮಂಚೇನಹಳ್ಳಿಯ ಪುರ ಗ್ರಾಮ ಪಂಚಾಯಿತಿಯ ಬೀಸಲಹಳ್ಳಿ ಗ್ರಾಮದಿಂದ ಚಿನ್ನಬೈರನ ಹಳ್ಳಿ, ಅಲಕಾಪುರ ಕಡೆಗೆ ಹೋಗುವ ಮಾರ್ಗದಲ್ಲಿ ಉತ್ತರ ಪಿನಾಕಿನಿ ನದಿ ಇದ್ದು, ನದಿಗೆ ಹೋಗುವುದಕ್ಕೆ ‘ಪುಷ್ಪ ಸಿನಿಮಾದಂತೆ ಇಲ್ಲಿನ ಜಮೀನುಗಳ ಮಧ್ಯೆ ರಸ್ತೆ ಮಾಡಿಕೊಂಡು ರಾಜಾರೋಷವಾಗಿ ಟಿಪ್ಪರ್, ಜೆಸಿಬಿ, ಟ್ರ್ಯಾಕ್ಟರ್ ಮೂಲಕ ನದಿಯ ಮರಳನ್ನು ಅಕ್ರಮವಾಗಿ ಸಾಗಿಸುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ.

ಮರಳು ಮಾಫಿಯಾ ಮಾಹಿತಿ ಕಲೆಹಾಕಿದ ಸೆನ್ ಪೊಲೀಸರು ಎರಡು ದಿನಗಳ ಕಾರ್ಯಾಚರಣೆ ನಡೆಸಿ ಕೊನೆಗೆ‌ ಮುಂಜಾನೆ ಮರಳು ಮಾಫೀಯಾ ಮಾಡುತ್ತಿದ್ದ ತಿಮ್ಮರೆಡ್ಡಿ ಮತ್ತು ಚಾಲಕ ರವಿಕುಮಾರ್ ನನ್ನು ಸ್ಥಳದಲ್ಲೇ ವಶಕ್ಕೆ ಪಡೆದು, ಒಂದು ಟಿಪ್ಪರ್, ಜೆಸಿಬಿ, ಮರಳು ಸಮೇತ ಜಪ್ತಿ ಮಾಡಲಾಗಿದೆ.

ಸ್ಥಳಕ್ಕೆ ಸೆನ್ ಡಿ ವೈ ಎಸ್ ಪಿ ರವಿಕುಮಾರ್, ಪಿಐ ಸೂರ್ಯಪ್ರಕಾಶ, ಪಿಎಸ್ಐ ಶರತ್ ಕುಮಾರ್, ಎ ಎಸ್ ಐ  ಸುಬ್ರಹ್ಮಣ್ಯ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

Leave a Reply

Your email address will not be published. Required fields are marked *