
ಕೊಟ್ಟಿಗೆಯಲ್ಲಿದ್ದ ಹಸುವಿನ ಮೇಲೆ ಚಿರತೆ ದಾಳಿ ನಡೆಸಿ, ಹಸುವಿನ ರುಂಡ-ಮುಂಡ ಬೇರ್ಪಡಿಸಿ ಅರೆಬರೆ ತಿಂದು ಪರಾರಿಯಾಗಿರುವ ಘಟನೆ ತಾಲೂಕಿನ ತಂಬೇನಹಳ್ಳಿಯಲ್ಲಿ ತಡರಾತ್ರಿ ನಡೆದಿದೆ.
ತಂಬೇನಹಳ್ಳಿ ಗ್ರಾಮದ ನಂಜಪ್ಪ ಎಂಬುವರಿಗೆ ಸೇರಿದ ಹಸು, ಚಿರತೆ ದಾಳಿಗೆ ಬಲಿಯಾಗಿದೆ. ಇಂದು ಬೆಳಗ್ಗೆ ಹಾಲು ಕರೆಯಲು ಕೊಟ್ಟಿಗೆಗೆ ಬಂದಾಗ ಹಸುವಿನ ರುಂಡ-ಮುಂಡ ಬೇರೆಯಾಗಿ ಬಿದ್ದಿದ್ದನ್ನು ರೈತ ನಂಜಪ್ಪ ಗಮನಿಸಿ ಗಾಬರಿಯಾಗಿದ್ದಾರೆ.
ಸುಮಾರು 20-25 ಸಾವಿರ ರೂಪಾಯಿ ಮೌಲ್ಯದ ಹಸು ಕಳೆದುಕೊಂಡ ರೈತ ನಂಜಪ್ಪ ಕಂಗಲಾಗಿದ್ದಾನೆ.
ಇತ್ತೀಚೆಗೆ ತಾಲೂಕಿನಲ್ಲಿ ಚಿರತೆಗಳ ಅಟ್ಟಹಾಸ ಮಿತಿಮೀರಿದ್ದು, ಚಿರತೆ ದಾಳಿಗೆ ಜಾನುವಾರುಗಳು ಬಲಿಯಾಗುತ್ತಲೇ ಇವೆ. ಕೂಡಲೇ ಚಿರತೆಗಳು ನಾಡಿಗೆ ಬರದಂತೆ ಎಚ್ಚರವಹಿಸಿ, ಜನ ಜಾನುವಾರುಗಳ ಪ್ರಾಣ ರಕ್ಷಣೆ ಮಾಡಬೇಕು ಎಂದು ಅರಣ್ಯ ಇಲಾಖೆಯಲ್ಲಿ ಗ್ರಾಮಸ್ಥರು ಒತ್ತಾಯಿಸಿದ್ದಾರೆ…