ಬುಡ ಬುಡಿಕೆ ವೇಷಧಾರಿಗಳಿಂದ ಮನೆ ಕಳ್ಳತನ: ಹಾಡಹಗಲೆ ಮಹಿಳೆಯರಿಗೆ ಮಂಪರು ಬರಿಸಿ ಚಿನ್ನಾಭರಣ ಲೂಟಿ ಮಾಡಿ ಎಸ್ಕೇಪ್: ಕ್ಷಣ ಮಾತ್ರದಲ್ಲೆ ಐದಾರು ಮನೆಗಳ ಮಹಿಳೆಯರಿಗೆ ಯಾಮಾರಿಸಿದ ಖದೀಮರು

ಕುಟುಂಬ ಅಂದರೆ ಯಾರಿಗೆ ಇಷ್ಟವಿರಲ್ಲ ಹೇಳಿ. ಅದರಲ್ಲೂ ಮಕ್ಕಳು, ಮನೆ ಒಡೆಯನ ಬಗ್ಗೆ ಹಾಗೇ ಆಗುತ್ತೆ, ಈಗೆ ಆಗುತ್ತೆ ಎಂದರೆ ಭಯ ಆಗೋದು ಗ್ಯಾರೆಂಟಿ ಅಲ್ಲವೇ. ಇದನ್ನೆ ಬಂಡವಾಳ ಮಾಡಿಕೊಂಡ ಕೆಲ ಬುಡ ಬುಡುಕೆ ವೇಷಧಾರಿಗಳು ಒಂದೇ ಗ್ರಾಮದ ಐದಾರು ಮನೆಗಳ ಮಹಿಳೆಯರನ್ನ ಯಾಮಾರಿಸಿ ಹಣ ಚಿನ್ನಾಭರಣ ದೋಚಿ ಎಸ್ಕೇಪ್ ಆಗಿದ್ದಾರೆ.

ಗ್ರಾಮದ ಮಹಿಳೆಯರಲ್ಲಿ ಆತಂಕ ಮನೆ ಮಾಡಿದೆ ಕ್ಷಣ ಮಾತ್ರದಲ್ಲಿ ಇಲ್ಲೆ ನಿಂತು ಮಾತನಾಡಿದವರು ನನ್ನ ಕೈಯಿಂದಲೆ ಚಿನ್ನದ ಆಭರಣ ನಗದು ಹಣವನ್ನ ತೆಗೆದುಕೊಂಡು ಹೋದ್ರು ಅಂತ ಮಹಿಳೆ ಹೇಳ್ತಿದ್ರೆ ನನ್ನ ಕಣ್ಣೀಗೆ ನೀರು ಹಾಕಿದ್ದು ಅಷ್ಟೆ ನೆನಪು ಅಂತ ಮನೆ ಯಜಮಾನ ಹೇಳ್ತಿದ್ದಾನೆ. ಇನ್ನೂ ಇದನ್ನೆಲ್ಲ ಮಾಡಿದ್ದು ಯಾರು ಅಂತ ಗ್ರಾಮದ ಸಿಸಿ ಕ್ಯಾಮರಾ ಪರಿಶೀಲನೆ ಮಾಡಿದವರಿಗೆ ಸಿಕ್ಕಿದ್ದು ಮಾತ್ರ ಬುಡ ಬುಡಿಕೆ ವೇಷದಾರಿಗಳ ಕೈಚಳಕ.

ಹೌದು… ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಜಾಲಿಗೆ ಗ್ರಾಮದ ಮುನಿರಾಜು ಅನ್ನೂ ಇವರ ಮನೆಗೆ ಬುಡ ಬುಡಿಕೆ ವೇಷಧಾರಿಗಳಿಬ್ಬರು ಬಂದಿದ್ರಂತೆ. ಜೊತೆಗೆ ಮನೆಯಲ್ಲಿ ಯಾರು ಇಲ್ಲ ಏನು ಹೇಳಬೇಡಿ ನಮಗೆ ಹೋಗಿ ಅಂತ ಮಹಿಳೆ ಹೇಳ್ತಿದ್ರು, ಜೇಬಿನಿಂದ ಗರಿ ಗರಿ ಹಣದ ನೋಟು ತೆಗೆದು ತೋರಿಸಿದ ಬುಡ ಬುಡಿಕೆ ವೇಷಧಾರಿ ನಮಗೆ ಹಣ ಬೇಡ ನಿಮ್ಮ ಗಂಡ ಸೇರಿದಂತೆ ಮಕ್ಕಳಿಗೆ ಎರಡು ವಾರದಲ್ಲಿ ಕೆಟ್ಟದ್ದು ಆಗಲಿದೆ ಅಂತ ಹೇಳಿದ್ದಾನೆ. ಹೀಗಾಗಿ ಸಹಜವಾಗೆ ಗಂಡ ಮಕ್ಕಳು ಅಂತಿದ್ದಂತೆ ಗಾಬರಿಗೊಂಡ ಮಹಿಳೆಗೆ ನೂರು ರೂಪಾಯಿ ಹಣ ನೀಡಿ ಸಾಕು ನಿಮ್ಮ ಕಷ್ಟ ಪರಿಹಾರ ಮಾಡಿಕೊಡ್ತೀವಿ ಅಂತ ಹೇಳಿದ ವೇಷಧಾರಿಗಳು ಪೂಜೆ ಮಾಡುವ ನೆಪದಲ್ಲಿ ಮನೆಯಲ್ಲಿದ್ದ ಗಂಡ ಹೆಂಡತಿ ಮೇಲೆ ನೀರು ಹಾಕಿದ್ರಂತೆ. ಇನ್ನೂ ನೀರು ಹಾಕ್ತಿದ್ದಂತೆ ದಂಪತಿಗಳಿಬ್ಬರು ಏನು ತಿಳಿಯದಂತೆ ಮನೆಯಲ್ಲಿದ್ದ ಚಿನ್ನದ ಉಂಗುರ, ಕಿವಿ ಓಲೆ ಸೇರಿದಂತೆ ನಾಲ್ಕೈದು ಸಾವಿರ ಹಣವನ್ನ ತಂದು ಅವರ ಕೈಗೆ ನೀಡಿದ್ದು ಚಿನ್ನ ಮತ್ತು ಹಣದ ಸಮೇತ ಇಬ್ಬರು ಅಪರಿಚಿತರು ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ.

ಅಪರಿಚಿತ ವೇಷಧಾರಿಗಳು ಹಣ ಒಡವೆಗಳನ್ನ ಪಡೆದುಕೊಳ್ತಿದ್ದಂತೆ ಸ್ಥಳದಿಂದ ಕಾಲ್ಕಿತ್ತಿದ್ದು, 10 ನಿಮಿಷದ ಬಳಿಕ ದಂಪತಿಗೆ ಚಿನ್ನ ಮತ್ತು ಹಣವನ್ನ ಲೂಟಿ ಮಾಡಿಕೊಂಡು ಹೋಗಿರುವುದು ಗೊತ್ತಾಗಿದೆ. ಅಲ್ಲದೆ ಈ ಬಗ್ಗೆ ಗ್ರಾಮದಲೆಲ್ಲ ಬುಡ ಬುಡಿಕೆ ವೇಷಧಾರಿಗಳಿಗಾಗಿ ಹುಡುಕಾಟ ನಡೆಸಿದಾಗ ಎಲ್ಲು ಕಾಣದಿದ್ದು ಗ್ರಾಮದ ಇತರೆ ಮಹಿಳೆಯರನ್ನು ಯಾಮಾರಿಸಿ ಹಣ ಮತ್ತು ಚಿನ್ನಾಭರಣ ದೋಚಿ ಎಸ್ಕೇಪ್ ಆಗಿರುವುದು ಗೊತ್ತಾಗಿದೆ. ಹೀಗಾಗಿ ಅಪರಿಚಿತ ವೇಷಧಾರಿಗಳಿಂದ ಹಣ ಕಳೆದುಕೊಂಡ ಐದಾರು ಜನ ಮಹಿಳೆಯರು ವಿಶ್ವನಾಥಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಇನ್ನೂ ಇದೇ ವೇಳೆ ಪಕ್ಕದ ಗ್ರಾಮದಲ್ಲಿ ಇಂದು ಇಬ್ಬರು ಬುಡ ಬುಡಿಕೆ ವೇಷಧಾರಿಗಳು ಸಿಕ್ಕಿದ್ದು ಅವರನ್ನ ಪ್ರಶ್ನಿಸಿದ ಗ್ರಾಮಸ್ಥರು ವಿಶ್ವನಾಥಫುರ ಪೊಲೀಸರ ವಶಕ್ಕೆ ನೀಡಿದ್ದಾರೆ.

ಒಟ್ಟಾರೆ ಮಹಿಳೆಯರ ವೀಕ್ನೆಸ್ ಅನ್ನೆ ಬಂಡವಾಳ ಮಾಡಿಕೊಂಡು ಒಂಟಿಯಾಗಿರುವ ಮಹಿಳೆಯರನ್ನ ಯಾಮಾರಿಸಿ ಚಿನ್ನಾಭರಣ ದೋಚಿರುವುದು ಸ್ಥಳಿಯರಲ್ಲಿ ಆತಂಕ ಮೂಡಿಸಿದೆ. ಇನ್ನೂ ಈ ಕುರಿತು ಸೆರೆ ಸಿಕ್ಕ ಇಬ್ಬರು ಅಪರಿಚಿತ ವೇಷಧಾರಿಗಳನ್ನ ವಿಶ್ವನಾಥಪುರ ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದು ಸಂಪೂರ್ಣ ತನಿಖೆ ನಂತರ ಆರೋಪಿಗಳು ಯಾರು ಅನ್ನೋದು ಗೊತ್ತಾಗಲಿದೆ.

Leave a Reply

Your email address will not be published. Required fields are marked *

error: Content is protected !!