
2 ವರ್ಷಗಳ 11 ತಿಂಗಳು 18 ದಿನಗಳ ಕಠಿಣ ಶ್ರಮದಿಂದ ನಂತರ, ಬಾಬಾ ಸಾಹೇಬರು ಭಾರತ ದೇಶಕ್ಕೆ ಎಲ್ಲಾ ಧರ್ಮಗಳು, ಪ್ರದೇಶಗಳು ಮತ್ತು ಭಾಷೆಗಳನ್ನು ಒಂದುಗೂಡಿಸುವ ಸಂವಿಧಾನವನ್ನು ನೀಡಿದರು.
ಬಾಬಾ ಸಾಹೇಬರು ಕತ್ತಿಗೆ ಷರತ್ತಿನಷ್ಟೇ ಶಕ್ತಿ ಇದೆ ಎಂಬುದನ್ನು ಸಂವಿಧಾನ ಬರೆದು ಸಾಬೀತುಪಡಿಸಿದರು. ದೀನದಲಿತರ ಆಶಾಕಿರಣ, ಭಾರತ ರತ್ನ ಸಂವಿಧಾನ ಶಿಲ್ಪಿ, ಮಹಾನ್ ಮಾನವತಾವಾದಿ, ಶೋಷಿತರ ಶಾಶ್ವತ ಧ್ವನಿ ಡಾ. ಬಿ.ಆರ್ ಅಂಬೇಡ್ಕರ್ ಮಹಾಪರಿನಿರ್ವಾಣ ದಿನದಂದು ನಮ್ಮ ಶ್ರದ್ಧಾಪೂರ್ವಕ ನಮನಗಳು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ತಾಲೂಕು ಕಾರ್ಯದರ್ಶಿ ಅಜಯ್ ಕುಮಾರ್. ಅಧ್ಯಕ್ಷ ಅರ್ಚನಾ, ತಾಲೂಕು ಸಮಿತಿ ಸದಸ್ಯ ನಾಗೇಶ್, ತಾಲೂಕು ಉಪಾಧ್ಯಕ್ಷರಾದ ಸುಭಾಷ್. ಸಿಂಧು, ಅನುರಾಧ, ಹೇಮಾವತಿ, ಪುಷ್ಪಾ ಸೇರಿದಂತೆ ಮತ್ತಿತರು ಇದ್ದರು.