ಬಾಬಾ ಸಾಹೇಬರ ದಾರಿಯಲ್ಲಿ ನಾವು ಹೊರಟರೆ ನಮ್ಮ ಬದುಕು ಶಾಂತಿ ಮತ್ತು ನೆಮ್ಮದಿಯಿಂದ ಕೂಡಿರುತ್ತದೆ- ಸಮಾಜ ಸೇವಕ ಜಿ. ರಾಜಗೋಪಾಲ್

ನಿಜವಾದ ಜ್ಞಾನಿಗಳು ಬಾಬಾ ಸಾಹೇಬರ ನಡೆ ಹಾಗೂ ಬುದ್ಧನ ದಾರಿಯಲ್ಲಿ ಅರಿತು ಹೊರಟರೆ ಇಡೀ ಜಗತ್ತೇ ಬುದ್ಧನ ಧಮ್ಮಕ್ಕೆ ಪರಿವರ್ತನೆ ಹೊಂದಿದರೂ ಆಶ್ಚರ್ಯ ವೇನಿಲ್ಲ ಎಂದು ಸಮಾಜ ಸೇವಕ ಜಿ. ರಾಜಗೋಪಾಲ್ ಅಭಿಪ್ರಾಯಪಟ್ಟರು.

ಡಾ. ಬಿ.ಆರ್ ಅಂಬೇಡ್ಕರ್ ಅಧ್ಯಯನ ಕೇಂದ್ರ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆಯೋಜಿಸಿದ್ದ 68ನೇ ಬಾಬಾ ಸಾಹೇಬರ ಪರಿನಿರ್ವಾಣ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಮಾತಾಡಿದ ಅವರು, ನಿಜವಾಗಿ ಬಾಬಾ ಸಾಹೇಬರ ದಾರಿಯಲ್ಲಿ ನಾವು ಹೊರಟರೆ ನಮ್ಮೆಲ್ಲರ ಬದುಕು ಶಾಂತಿ ಮತ್ತು ನೆಮ್ಮದಿಯಿಂದ ಕೂಡಿರುತ್ತದೆ. ಇಂದಿನ ಜಗತ್ತಿಗೆ ಬಾಬಾ ಸಾಹೇಬರ ಜ್ಞಾನ, ಬುದ್ಧನ ಮೈತ್ರಿ ಹಾಗೂ ಬಸವಣ್ಣನ ಕ್ರಾಂತಿ ಪ್ರಸ್ತುತವಾಗಿವೆ ಎಂದು ವಿದ್ಯಾರ್ಥಿಗಳಿಗೆ ಪರಿನಿರ್ವಾಣದ ಮಹತ್ವವನ್ನು ತಿಳಿಸಿದರು.

ಈ ಕಾರ್ಯಕ್ರಮದ ಪ್ರಸ್ತಾವನೆಯನ್ನು ಮಂಡಿಸಿದ ಡಾ.ಪ್ರಕಾಶ್ ಮಂಟೇದ ಬುದ್ಧನ ಪರಿನಿಬ್ಬಾಣವು ಬಹುಶಹ ಇಂದಿನ ಅನುಭೋಗ ಜಗತ್ತಿನ ರೋಗಗ್ರಸ್ಥ ಜನಕ್ಕೆ ಮದ್ದಾಗಬಲ್ಲದು ಹಾಗೂ ಬಾಬಾ ಸಾಹೇಬರು ಬುದ್ಧನನ್ನು ಕುರಿತು ಚಿಂತಿಸಿದ ಬಗೆ ಸರ್ವರ ಸುಖ ಶಾಂತಿಯ ನೆಮ್ಮದಿ ತತ್ವವನ್ನು ಹೇಳುತ್ತದೆ‌. ಅವರು ಹೇಳಿದಂತೆ, ನಾವು ತ್ಯಾಗ, ತಾಳ್ಮೆ ಮತ್ತೂ ನಿಶ್ವಾರ್ಥತೆಯಿಂದ ನಮ್ಮ ಬಲವನ್ನೆಲ್ಲ ಒಗ್ಗೂಡಿಸಿ ಕಾರ್ಯನಿರ್ವಹಿಸಬೇಕಿದೆ. ಈ ದಿಶೆಯಲ್ಲಿ ಮುಂದೆ ಅಂಬೇಡ್ಕರ್ ಅಧ್ಯಯನ ಕೇಂದ್ರವು ಬಾಬಾ ಸಾಹೇಬರ ಸಮಾಜೋರ್ಥಿಕ ಆಧ್ಯಾತ್ಮಿಕ ವಿಚಾರಗಳನ್ನು ಯುವ ಜನತೆಯ ಜೊತೆ ಹಂಚುವ ಪ್ರಯತ್ನವನ್ನು ಮಾಡುತ್ತದೆ ಎಂದರು..

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಪ್ರಾಂಶುಪಾಲರಾದ ಡಾ. ಸದಾಶಿವ ರಾಮಚಂದ್ರಗೌಡ, ಬಾಬಾ ಸಾಹೇಬರ ಜ್ಞಾನ ಮೇಧಾಶಕ್ತಿ ಎಲ್ಲವೂ ನಮ್ಮ ನಡೆ ನುಡಿ ಒಳಗೆ ಪ್ರಕಟವಾಗಬೇಕೆಂದು ಆಗ್ರಹಪಡಿಸಿದರು.

ಈ ಕಾರ್ಯಕ್ರಮದಲ್ಲಿ ಡಾ. ಬಿ. ಆರ್ ಗಂಗಾಧರಯ್ಯ, ಪ್ರೊ.ಡೊರೀನ್ ಸ್ನೇಹಲತಾ, ಪ್ರೊ. ಲಲಿತಮ್ಮ ಹಾಗೂ ಡಾ. ಸತೀಶ್ ಇಟಗಿ, ಪ್ರೊ. ನೀರಜಾ ದೇವಿ, ಡಾ. ಶೋಭಾ ಮಲ್ಹಾರಿ, ವಿನೋದ್ ಸೇರಿದಂತೆ ಮುಂತಾದವರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!