
ಪುರಾತನ ಕಾಲದ ವೀರಗಲ್ಲುಗಳನ್ನು ಸಂರಕ್ಷಣೆ ಮಾಡಬೇಕೆಂದು ಸರ್ಕಾರದ ಆದೇಶವಿದ್ದು, ಕೊನಘಟ್ಟ ಗ್ರಾಮದಲ್ಲಿರುವ ಪುರಾತನ ಕಾಲದ ವೀರಗಲ್ಲು ಹಾಗೂ ಮಾಸ್ತಿಗಲ್ಲು (ವೀರಣೇಶ್ವರ ದೇವಸ್ಥಾನ) ಶಿಲೆಗಳನ್ನು ಜೀರ್ಣೋದ್ದಾರ ಮಾಡಲು ಸ್ಥಳ ನೀಡುವಂತೆ ಒತ್ತಾಯಿಸಿ ಊರಿನ ಗ್ರಾಮಸ್ಥರು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರು ಯಾವ ಕ್ರಮ ಕೈಗೊಂಡಿರುವುದಿಲ್ಲ ಎಂದು ಊರಿನ ಗ್ರಾಮಸ್ಥರು ಆರೋಪಿಸಿದ್ದಾರೆ.
ಸರ್ವೆ ನಂ.361 ಖರಾಬು ಜಾಗ ಆಗಿರುವುದರಿಂದ ಈ ಜಾಗದಲ್ಲಿ ವ್ಯವಸಾಯ ಸಹಕಾರ ಸೇವಾ ಸಂಘ ಇದ್ದು, ಹಾಗೂ ಓವರ್ ಟ್ಯಾಂಕ್ ಇದೆ. ಈ ಜಾಗದಲ್ಲಿ ದೇವಾಸ್ಥಾನ ಸಹ ಇದ್ದು, ಈಗ ದೇವಸ್ಥಾನವು ಶಿಥಿಲಗೊಂಡಿರುತ್ತದೆ. ಇದನ್ನು ಜೀರ್ಣೋದ್ಧಾರ ಮಾಡಬೇಕೆಂದು ಊರಿನ ಗ್ರಾಮಸ್ಥರು 03/11/2023 ರಂದು ಕೊನಘಟ್ಟ ಗ್ರಾಮ ಪಂಚಾಯ್ತಿ, ತಹಶೀಲ್ದಾರ್ ಹಾಗೂ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ರವರಿಗೆ ಅರ್ಜಿ ಕೊಟ್ಟರೂ ಸಹ ಯಾವುದೇ ಕ್ರಮವನ್ನು ತೆಗೆದುಕೊಂಡಿರುವುದಿಲ್ಲ. ಮತ್ತೆ 06/02/2024ರಂದು ತಹಶೀಲ್ದಾರ್ ರವರಿಗೆ ಮತ್ತೊಂದು ಅರ್ಜಿ ಕೊಟ್ಟರೂ ಸಹ ಇದರ ಬಗ್ಗೆ ಯಾವುದೇ ಕ್ರಮ ತೆಗೆದುಕೊಂಡಿರುವುದಿಲ್ಲ. ಈ ಹಿನ್ನೆಲೆ ಇದರ ಬಗ್ಗೆ ಗಮನ ಹರಿಸಬೇಕೆಂದು ಇಂದು ಜಿಲ್ಲಾಧಿಕಾರಿಗೂ ಪತ್ರ ಬರೆಯಲಾಗಿದೆ. ಇನ್ನಾದರೂ ಅಧಿಕಾರಿಗಳು ಕ್ರಮಕೈಗೊಳ್ಳುತ್ತಾರಾ ಎಂದು ಕಾದುನೋಡಬೇಕಿದೆ….