
ನಾಳೆ ಎನ್ ಸಿಸಿ ದಿನದ ಅಂಗವಾಗಿ ನಗರದ ಶ್ರೀ ಕೊಂಗಾಡಿಯಪ್ಪ ಪದವಿ ಕಾಲೇಜಿನ ಎನ್ ಸಿಸಿ ವಿದ್ಯಾರ್ಥಿಗಳಿಂದ ಹುಲುಕಡಿ ಬೆಟ್ಟದವರೆಗೆ ಸೈಕ್ಲಿಂಗ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಬೆಳಗ್ಗೆ 6:30ಕ್ಕೆ ಸರಿಯಾಗಿ ನಗರದ ಶ್ರಿ ಕೊಂಗಾಡಿಯಪ್ಪ ಕಾಲೇಜಿನಿಂದ ದೊಡ್ಡಬೆಳವಂಗಲ ಹೋಬಳಿಯ ಹುಲುಕಡಿ ಬೆಟ್ಟದವರೆಗೆ ಸೈಕ್ಲಿಂಗ್ ಹಮ್ಮಿಕೊಳ್ಳಲಾಗಿದೆ. ನಂತರ ಹುಲುಕಡಿ ಬೆಟ್ಟಕ್ಕೆ ಟ್ರೆಕ್ಕಿಂಗ್ ಮೂಲಕ ತೆರಳಿ ಅಲ್ಲಿ ಸ್ವಚ್ಛತೆ ಕಾರ್ಯ ನಡೆಸಲಾಗುವುದು ಎಂದು ಕನ್ನಡ ವಿಭಾಗದ ಮುಖ್ಯಸ್ಥ ಹಾಗೂ ಎನ್ ಸಿಸಿ ಲೆಫ್ಟಿನೆಂಟ್ ಪ್ರವೀಣ್ ಪ್ರವೀಣ್ ಅವರು ತಿಳಿಸಿದ್ದಾರೆ.