ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್‌ ಭೇಟಿಯಾಗಲು ಇಲ್ಲಿದೆ ಸುವರ್ಣಾವಕಾಶ

ಬೆಂಗಳೂರು: ಅತಿ ನಿರೀಕ್ಷಿತ ಪುಷ್ಪಾ-2 ಸಿನಿಮಾ ಇದೀಗ ಡಾರ್ಕ್‌ ಫ್ಯಾಂಟಸಿಯೊಂದಿಗೆ ಸಹಯೋಗ ಘೋಷಿಸಿದ್ದು, ನಟ ಅಲ್ಲು ಅರ್ಜುನ್‌ ಅವರನ್ನು ಭೇಟಿ ಮಾಡುವ “’ಬಿಗ್ಗೆಸ್ಟ್ ಫ್ಯಾನ್ ಬಿಗ್ಗೆಸ್ಟ್ ಫ್ಯಾಂಟಸಿ” ಸ್ಪರ್ಧೆಯನ್ನು ಆಯೋಜಿಸಿದೆ.

ಈ ಸ್ಪರ್ಧೆಯಲ್ಲಿ ವಿಜೇತರಾಗುವ ಐದು ಅದೃಷ್ಟಶಾಲಿಗೆ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್‌ ಅವರನ್ನು ಭೇಟಿಯಾಗುವ ಸುವರ್ಣಾವಕಾಶ ಸಿಗಲಿದೆ.

ಐಟಿಸಿ ಲಿಮಿಟೆಡ್‌ನ ಬಿಸ್ಕತ್ತುಗಳು ಮತ್ತು ಕೇಕ್ಸ್ ಕ್ಲಸ್ಟರ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ಅಲಿ ಹ್ಯಾರಿಸ್, ಆಸಕ್ತರು www.biggestfanbiggestfantasy.com ಈ ವೆಬ್‌ಸೈಟ್‌ನಲ್ಲಿ ಆಗ್ಮೆಂಟೆಡ್ ರಿಯಾಲಿಟಿ (AR) ಫಿಲ್ಟರ್ ಬಳಸಿ ಡಾರ್ಕ್‌ಫ್ಯಾಂಟಸಿಯೊಂದಿಗೆ ಸೆಲ್ಫಿ ತೆಗೆದುಕೊಂಡು ಅದನ್ನು ಸಾಮಾಜಿಕ ಜಾಲತಾಣವಾದಲ್ಲಿ ಸನ್‌ಫೀಸ್ಟ್‌ ಡಾರ್ಕ್‌ ಫ್ಯಾಂಟಸಿ ಪೇಜ್‌ನನ್ನು ಅಟ್ಯಾಚ್‌ ಮಾಡಬೇಕು. ಇದರಲ್ಲಿ ಆಯ್ಕೆಯಾದ ಐದು ಅದೃಷ್ಟಶಾಲಿಗಳಿಗೆ ಅಲ್ಲುಅರ್ಜುನ್‌ ಭೇಟಿ ಮಾಡುವುದು ಹಾಗೂ ಇತರೆ ಅತ್ಯಾಕರ್ಷ ಬಹುಮಾನವನ್ನು ಗೆಲ್ಲಬಹುದು.

ಪುಷ್ಟಾ-2 ಸಿನಿಮಾ ಪ್ರಚಾರದ ಭಾಗವಾಗಿ ಸನ್‌ಫೀಸ್ಟ್ ಡಾರ್ಕ್‌ ಫ್ಯಾಂಟಸಿಯ ಪ್ಯಾಕ್‌ಗಳ ಮೇಲೆ ಪುಷ್ಪಾ ಅವತಾರದಲ್ಲಿ ಅಲ್ಲು ಅರ್ಜುನ್‌ ಅವರ ವಿಶೇಷ ಚಿತ್ರವನ್ನು ಮುದ್ರಿಸಿದೆ ಎಂದು ಹೇಳಿದರು.

ಸಿಇಒ, ಮೈತ್ರಿ ಮೂವಿ ಮೇಕರ್ಸ್, ಶ್ರೀ ಚೆರ್ರಿ ಮಾತನಾಡಿ, ಡಾರ್ಕ್‌ ಫ್ಯಾಂಟಸಿ ಅವರೊಂದಿಗೆ ಸಹಭಾಗಿತ್ವ ಘೊಷಿಸಿರುವುದು ಅತ್ಯಂತ ಸಂತಸ ತಂದಿದೆ ಎಂದು ಹೇಳಿದರು.

Leave a Reply

Your email address will not be published. Required fields are marked *

error: Content is protected !!