ಗೂಗಲ್ ಮ್ಯಾಪ್ ಎಡವಟ್ಟಿನಿಂದ ದೊಡ್ಡ ದುರಂತವೊಂದು ಉತ್ತರ ಪ್ರದೇಶದ ರಾಯ್ ಬರೇಲಿಯಲ್ಲಿ ಸಂಭವಿಸಿದೆ.
ಮದುವೆ ಮನೆಗೆ ರೀಚ್ ಆಗಲು ಗೂಗಲ್ ಮ್ಯಾಪ್ ನೆಚ್ಚಿಕೊಂಡು ಕಾಮಗಾರಿ ನಡೆಯುತ್ತಿದ್ದ ಸೇತುವೆಯಲ್ಲಿ ಸಂಚರಿಸಿದ ಕಾರು ರಾಮಗಂಗಾ ನದಿಗೆ ಉರುಳಿದೆ.
ಗೂಗಲ್ ಮ್ಯಾಪ್ ಕಾಮಗಾರಿ ನಡೆಯುತ್ತಿದ್ದ ಸೇತುವೆಯನ್ನು ದಾರಿಯಾಗಿ ತೋರಿಸಿತ್ತು. ಇದರಿಂದಾಗಿ ಈ ಮಾರ್ಗದಲ್ಲಿ ಸಾಗಿದ ಕಾರು, ನದಿಗೆ ಉರುಳಿ ಬಿದ್ದು ಮೂವರು ಸಾವನ್ನಪ್ಪಿರುವ ಘಟನೆ ಫರೀದ್‌ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.