ಬೆಂಗಳೂರು ನಗರ ಜೆ.ಸಿ. ರಸ್ತೆಯ ಡೆಪ್ಯೂಟಿ ಕಮಿಷನ್ ಆಫ್ ಎಕ್ಸ್ಪ್ರೆಸ್ ನಲ್ಲಿ ಅಬಕಾರಿ ಉಪ ನಿರೀಕ್ಷಕರಾಗಿದ್ದ ಎಂ.ರಾಮಚಂದ್ರ ಇವರು ಆದಾಯ ಮೀರಿದ ಆಸ್ತಿ ಗಳಿಕೆ ಹಿನ್ನೆಲೆಯಲ್ಲಿ ನ್ಯಾಯಾಧೀಶ ಸತೀಶ್ ಜೆ.ಬಾಲಿ ಅವರು ಆಪಾದಿತರಿಗೆ 3 ವರ್ಷ ಕಠಿಣ ಶಿಕ್ಷೆ ಹಾಗೂ 50 ಲಕ್ಷ ದಂಡ ವಿಧಿಸಿ ಆದೇಶಿಸಿದ್ದಾರೆ.
ದಂಡ ಪಾವತಿಸಲು ವಿಫಲವಾದಲ್ಲಿ 6 ತಿಂಗಳ ಶಿಕ್ಷೆ ವಿಧಿಸಲಾಗುವುದು.
ಸದರಿಯವರು ಆರಂಭದಲ್ಲಿ ಇಲಾಖೆಗೆ ಅಬಕಾರಿ ಗಾರ್ಡ್ ಆಗಿ ಸೇವೆಗೆ ಸೇರಿದ್ದು, ಪ್ರಸ್ತುತ ಅವರ ಆಸ್ತಿ 171 ಪಟ್ಟು ಹೆಚ್ಚಳವಾದ ಹಿನ್ನೆಲೆಯಲ್ಲಿ ಅಕ್ರಮ ಆಸ್ತಿ ಸಂಪಾದನೆ ಮಾಡಿರುವ ಮಾಹಿತಿ ಮೇರೆಗೆ ಡಿ.ಟಿ.ಶ್ರೀನಿವಾಸ್ ಪೊಲೀಸ್ ಅಧೀಕ್ಷಕರು ಪ್ರಕರಣ ದಾಖಲಿಸಿ, 53 ಸಾಕ್ಷಿದಾರರು ಮತ್ತು 559 ದಾಖಲಾತಿಗಳನ್ನು ಹಾಜರುಪಡಿಸಲಾಗಿತ್ತು.
ಪೊಲೀಸ್ ಅಧೀಕ್ಷಕರ ಆದೇಶದಂತೆ ಪೊಲೀಸ್ ಇನ್ಸ್‌ಪೆಕ್ಟರ್ ಗಳಾದ ಡಾ.ಎಸ್.ಪ್ರಕಾಶ್ ಹಾಗೂ ಗೌತಮ್ ತನಿಖೆ ನಡೆಸಿದ್ದರು.