ಉಳುಮೆ ಮಾಡುವಾಗ ಪುರಾತನ ವಿಗ್ರಹ ಪತ್ತೆ: ವೀರಭದ್ರೇಶ್ವರ ಅಥವಾ ಚೆನ್ನಕೇಶವ ದೇವರ ವಿಗ್ರಹವೆಂಬ ಶಂಕೆ

ಗೌರಿಬಿದನೂರು ತಾಲೂಕಿನ ಮೇಳ್ಯಾ ಗ್ರಾಮದ ರೈತ ರಾಜು ಅವರ ತೋಟದಲ್ಲಿ ಪುರಾತನ ವಿಗ್ರಹವು ಬೆಳಕಿಗೆ ಬಂದಿದೆ.

ಗ್ರಾಮದ ರೈತ ರಾಜು ಟ್ರಾಕ್ಟರ್ ಮೂಲಕ ಉಳುಮೆ ಮಾಡುವಾಗ ಈ ವಿಗ್ರಹ ಪತ್ತೆಯಾಗಿದ್ದು, ಮೊದಲಿಗೆ ಈ ವಿಗ್ರಹವನ್ನು ವೀರಭದ್ರೇಶ್ವರ ಅಥವಾ ಚೆನ್ನಕೇಶವ ದೇವರ ವಿಗ್ರಹವೆಂಬ ಶಂಕೆ ವ್ಯಕ್ತಪಡಿಸಲಾಗಿತ್ತು.

ಗ್ರಾಮಸ್ಥರ ಪ್ರಕಾರ, ಈ ವಿಗ್ರಹವು ವಿಜಯನಗರ, ಚೋಳ ಅಥವಾ ಗಂಗರ ಸಾಮ್ರಾಜ್ಯದ ಕಾಲದ ಛಾಯೆಯನ್ನು ಹೊಂದಿದೆ ಎಂದು ಅಂದಾಜಿಸಲಾಗುತ್ತಿದೆ.

ಕಲ್ಲಿನಿಂದ ನಿರ್ಮಿತವಾಗಿರುವ ಈ ಪುರಾತನ ವಿಗ್ರಹವನ್ನು ನೋಡಿದಾಗ ಗ್ರಾಮಸ್ಥರು ಆಶ್ಚರ್ಯಗೊಂಡಿದ್ದಾರೆ. ರಾಜು ಅವರು ತೋಟದಲ್ಲಿ ಕೃಷಿ ಕಾರ್ಯನಿಮಿತ್ತ ಉಳುಮೆ ಮಾಡುವ ವೇಳೆ ಕಲ್ಲಿನ ಭಾಗದಂತೆ ಒಂದು ವಿಗ್ರಹದ ಭಾಗ ಕಾಣಿಸಿಕೊಂಡಿದೆ. ನಂತರ ಗ್ರಾಮಸ್ಥರು ಇದು ಪುರಾತನ ಕಾಲದ ವಿಗ್ರಹ ಎಂದು ಊಹಿಸಿದ್ದಾರೆ.

ತಕ್ಷಣವೇ ಅಧಿಕಾರಿಗಳಿಗೆ ವಿಗ್ರಹ ಪತ್ತೆಯ ಬಗ್ಗೆ ಮಾಹಿತಿ ನೀಡಲಾಗಿದೆ.

ಇನ್ನೂ ಈ ವಿಗ್ರಹದ ಕುರಿತು ಪುರತತ್ವ ವಿಜ್ಙಾನಿ ನರಸಿಂಹಮೂರ್ತಿ ಮಾತನಾಡಿ, ಈ ವಿಗ್ರಹ ನಳಂದ ಹಾಗೂ ಗಂಗರ ಕಾಳದ ವಿಗ್ರಹ ಎಂದು ತಿಳಿಯುತ್ತಿದ್ದು, ಇದು ಸೂರ್ಯ ದೇವರ ವಿಗ್ರಹ ಎಂದು ಗುರುತ್ತಿಸಿದ್ದಾರೆ.

ಇನ್ನೂ ಈಗಾಗಲೇ ಈ ಭಾಗದಲ್ಲಿ ತನಿಖೆಯನ್ನು ನಡೆಸಿದ ವೇಳೆ ಇಲ್ಲಿ ಕಾಲಭೈರವನ ದೇವಸ್ಥಾನ ಇತ್ತು ಎಂದು ತಿಳಿದು ಬಂದಿತ್ತು. ಆದರೆ ಈಗ ಸಾವಿರ ವರ್ಷಗಳ ಇತಿಹಾಸವಿರುವ ವಿಗ್ರಹ ಪತ್ತೆಯಾಗಿದ್ದು ಸಂಶೋದನೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *