
ನೆಲಮಂಗಲ: ಹಾಲಿನ ಡೈರಿ ಕಾರ್ಯದರ್ಶಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ ಮಾಡಿರುವ ಘಟನೆ ನೆಲಮಂಗಲ ತಾಲೂಕಿನ ಬಿಲ್ಲಿನಕೋಟೆ ಗ್ರಾಮದ ಹಾಲಿನ ಡೈರಿಯಲ್ಲಿ ನಡೆದಿದೆ.
ಬಿಲ್ಲಿಕೋಟೆ ಹಾಲಿನ ಡೈರಿ ಕಾರ್ಯದರ್ಶಿ ವಿನೋದ್ ಆತ್ಮಹತ್ಯೆಗೆ ಯತ್ನ ಮಾಡಿದ್ದಾರೆ. ಮೇಲಾಧಿಕಾರಿಗಳ ಕಿರುಕುಳಕ್ಕೆ ಮನನೊಂದು ಆತ್ಮಹತ್ಯೆಗೆ ಯತ್ನ ಮಾಡಿರುವ ಆರೋಪ ಕೇಳಿಬಂದಿದೆ.
ಘಟನೆಯನ್ನು ಗಮನಿಸಿದ ಸ್ಥಳೀಯರು ತಕ್ಷಣ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮೂರು ಜನ ಮೇಲಾಧಿಕಾರಿಗಳ ಹೆಸರನ್ನು ಬರೆದಿಟ್ಟು ಆತ್ಮಹತ್ಯೆ ಯತ್ನಿಸಿದ್ದಾರೆ.
ರೈತರ ಹಾಲಿಗೆ ನೀಡುವ ಹಣ ತಡೆಹಿಡಿದು ಕಾರ್ಯದರ್ಶಿಗೆ ಕಿರುಕುಳ ನೀಡಿದ್ದರು ಆರೋಪಿಸಲಾಗಿದೆ.