ಕೋಲಾರ: ಗ್ರಾಮೀಣ ಭಾಗದ ಜನರಿಗೆ ಸಾಂಸ್ಕೃತಿಕ ರಸದೌತಣ ನೀಡುವ ಸಲುವಾಗಿ ಪ್ರತಿ ವರ್ಷದಂತೆ ಈ ಬಾರಿಯು ತಾಲೂಕಿನ ವೇಮಗಲ್ ಪಟ್ಟಣದಲ್ಲಿ ನ.10 ರಂದು ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಪಂ ಮಾಜಿ ಅಧ್ಯಕ್ಷ ಸಿ.ಎಸ್ ವೆಂಕಟೇಶ್ ತಿಳಿಸಿದರು.
ವೇಮಗಲ್ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಮೈಸೂರು ದಸರಾ ಆಚರಣೆಯ ರೀತಿಯಲ್ಲಿ ಅಂದು ವೇಮಗಲ್ ಪಟ್ಟಣದಲ್ಲಿ ದೀಪಾಲಂಕಾರಿಂದ ಅಲಂಕರಿಸಿ ಗ್ರಾಮೀಣ ಭಾಗದ ಜನರಿಗೆ ಸಾಂಸ್ಕೃತಿಕ ರಸದೌಟಣ ನೀಡಲಾಗುವುದು ಎಂದು ತಿಳಿಸಿದರು.
ಕನ್ನಡ ರಾಜ್ಯೋತ್ಸವ ಸಮಿತಿ ವತಿಯಿಂದ ಈ ಭಾಗದ ಎಲ್ಲಾ ಸಂಘಟನೆಗಳ ಹಾಗೂ ಮುಖಂಡರ ಸಹಕಾರದಿಂದ ಆಚರಿಸಲಾಗುತ್ತಿರುವ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಸುಮಾರು 15 ರಿಂದ 20 ಸಾವಿರ ಜನರು ಸೇರುವ ನೀರಿಕ್ಷೆಯಿದ್ದು ನ.೧೦ ರಂದು ಬೆಳಗ್ಗೆ 9 ಗಂಟೆಗೆ ಬಸ್ ನಿಲ್ದಾಣದಲ್ಲಿ ಧ್ವಜಾರೋಹಣ 9:30 ಕ್ಕೆ ಭುವನೇಶ್ವರಿ ಪಲ್ಲಕ್ಕಿ ಪೂಜೆ ಮತ್ತು ಪ್ರಸಾದ ವಿನಿಯೋಗ ಹಾಗೂ ಅತಿಥಿಗಳಿಂದ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು ಬೆಳಗ್ಗೆ 10 ಗಂಟೆಗೆ ವಿಶೇಷವಾಗಿ ಅಲಂಕೃತಗೊಳಿಸಲಾಗುವ ಆಟೋಗಳೊಂದಿಗೆ ವಿಶೇಷ ಕಲಾ ತಂಡಗಳು ಪಟ್ಟಣದ ಪ್ರಮುಖ ರಾಜ ಬೀದಿಗಳಲ್ಲಿ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಅಂದು ಸಂಜೆ 6 ಗಂಟೆಗೆ ಪಟ್ಟಣದ ಕ್ರೀಡಾಂಗಣದಲ್ಲಿ ಹಲವು ಸಿನಿ ತಾರೆಯರಿಂದ ಬಡವ್ರ ಮಕ್ಳು ಬೆಳಿಬೇಕು ಕಣ್ರಯ್ಯ ಸಿನಿಮಾದ ಟೀಸರ್ ಬಿಡುಗಡೆ ಮತ್ತು ಅದ್ದೂರಿಯಾಗಿ ವೇದಿಕೆಯ ರಸಮಂಜರಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಬಡವರ ಮಕ್ಕಳು ಹೇಗೆ ಜೀವನ ನಡೆಸುತ್ತಾರೆ ಎನ್ನುವ ಅಥಗರ್ಭಿತ ಸಿನಿಮಾ ಇದಾಗಿದ್ದು ಕುಟುಂಬ ಸಮೇತ ಕುಳಿತು ನೋಡಬಹುದಾಗಿರುವ ಸಿನಿಮಾ ಇದಾಗಿದೆ ನಟ ಡಾಲಿ ಧನಂಜಯ್ ಅವರು ನೀಡಿರುವ ಟೈಟಲ್ ಹೆಸರಲ್ಲೇ ಸಿನಿಮಾ ನಿರ್ಮಾಣ ಮಾಡಲಾಗಿದೆ ಎಂದರು.
ಈ ಸಿನಿಮಾವನ್ನು ಮಂಜುಕವಿ ನಿರ್ದೇಶನದಲ್ಲಿ ನಾನು ನಿರ್ಮಾಣ ಮಾಡಿರುವ ಸಿನಿಮಾದಲ್ಲಿ ನಾಲ್ಕು ಹಾಡುಗಳನ್ನು ಅರ್ಥಪೂರ್ಣವಾಗಿ ನಿರ್ಮಾಣ ಮಾಡಲಾಗಿದೆ ಯಾವುದೇ ರೀತಿಯ ಪೈಟಿಂಗ್ ಸೀನ್ಸ್ ಈ ಸಿನಿಮಾದಲ್ಲಿ ಇಲ್ಲ ಗ್ರಾಮೀಣ ಭಾಗದಲ್ಲಿ ಜನರಿಗೆ ಸಿನಿಮಾಗಳ ಟೀಸಲ್ ರಿಲೀಸ್ ಕಾರ್ಯಕ್ರಮಗಳನ್ನು ವೀಕ್ಷಣೆ ನಡೆಸಲು ಸಾಧ್ಯವಾಗುವುದಿಲ್ಲ ಆದ್ದರಿಂದ ನಮ್ಮ ಸಿನಿಮಾ ಟೀಸರ್ ರೀಲೀಸ್ ಕಾರ್ಯಕ್ರಮವನ್ನು ಕನ್ನಡ ರಾಜ್ಯೋತ್ಸವ ಜೊತೆಗೆ ಜೊತೆಗೆ ಹಮ್ಮಿಕೊಳ್ಳಲಾಗಿದೆ ಪ್ರತಿಯೊಬ್ಬರು ಕಾರ್ಯಕ್ರಮಕ್ಕೆ ಆಗಮಿಸಬೇಕು ಎಂದು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಗೌಡರ ಚಿಕ್ಕಮುನಿಯಪ್ಪ, ಯಜಮಾನ್ ಅಶ್ವಥಪ್ಪ, ಕನ್ನಡ ರಾಜ್ಯೋತ್ಸವ ಸಮಿತಿ ಅಧ್ಯಕ್ಷ ಎಸ್. ಮಂಜುನಾಥ್ ತಿಗಳ ಜನಾಂಗದ ಅಧ್ಯಕ್ಷ ರಾಜೇಂದ್ರ ಪ್ರಸಾದ್, ವಕ್ಕಲಿಗರ ಸಂಘದ ಅಧ್ಯಕ್ಷ ಮಂಜುನಾಥ್, ಕಾರ್ಯದರ್ಶಿ ಶ್ರೀನಿವಾಸ್, ರಾಜ್ಯ ನಿರ್ದೇಶಕ ವೆಂಕಟೇಶ್, ಕಸ್ತೂರಿ ಬಳಗ ರಾಜಕುಮಾರ್, ಕಾಂತರಾಜ್, ಪೊಲೀಸ್ ಚಲಪತಿ, ಜಮೀರ್, ಮುಂತಾದವರು ಇದ್ದರು.