ಕೊಲ್ಕತ್ತಾ : ಲಾರ್ಡ್ ಶಾರ್ದುಲ್ ಠಾಕೂರ್ ಅವರ ಸಿಡಿಲಬ್ಬರದ ಬ್ಯಾಟಿಂಗ್ ಹಾಗೂ ಸ್ಪಿನ್ನರ್ ಗಳು ಬೀಸಿದ ಬಲೆಗೆ ಬಿದ್ದ ಆರ್ ಸಿಬಿ ಬ್ಯಾಟ್ಸ್ಮನ್ ಗಳು 123 ರನ್ ಗಳಿಸಿ ಆಲೌಟ್ ಆಗುವ ಮೂಲಕ ಕೊಲ್ಕತ್ತಾ ನೈಟ್ ರೈಡರ್ಸ್ 81 ರನ್ಗಳ ಬೃಹತ್ ಗೆಲುವಿನ ನಗೆ ಬೀರಿದರು.
ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ನಡೆದ ಕೆಕೆಆರ್ ಹಾಗೂ ಆರ್ ಸಿಬಿ ನಡುವಿನ ಪಂದ್ಯದಲ್ಲಿ ಟಾಸ್ ಗೆದ್ದ ನಾಯಕ ಪಾಫ್ ಡುಪ್ಲೆಸಿ ಎದುರಾಳಿ ತಂಡವನ್ನು ಬ್ಯಾಟಿಂಗ್ ಗೆ ಆಹ್ವಾನಿಸಿದರು.
ಆರಂಭಿಕ ಜೋಡಿ ಗುಬಾ೯ಜ್ (57) ಹಾಗೂ ವೆಂಕಟೇಶ್ ಅಯ್ಯರ್ (3)ರನ್ ಗಳಿಸಿ ವಿಲ್ಲೆಗೆ ವಿಕೆಟ್ ಒಪ್ಪಿಸಿದರು, ನಂತರ ಬಂದ ಮಂದಿಪ್(0), ನಾಯಕ ನಿತೀಶ್ ರಾಣ (1) ಹಾಗೂ ಅನುಭವಿ ಆಲ್ ರೌಂಡರ್(0) ಬೇಗನೆ ವಿಕೆಟ್ ಒಪ್ಪಿಸಿದರು.
ಮದ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಗಳಾದ ಶಾರ್ದುಲ್ ಠಾಕೂರ್ (68) ಹಾಗೂ ರಿಂಕು ಸಿಂಗ್ (46) ಶತಕದ ಜೊತೆಯಾಟದಿಂದ ತಂಡದ ಮೊತ್ತ 200 ರನ್ ಗಡಿ ದಾಟಿಸಿ ಆರ್ ಸಿಬಿ ಗೆ ಬೃಹತ್ ಮೊತ್ತದ ಗುರಿ ನೀಡಿತು.
ಗುರಿ ಬೆನ್ನಟ್ಟಿದ ಆರ್ ಸಿಬಿ ಆರಂಭಿಕ ಅನುಭವಿ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ (21) ಹಾಗೂ ನಾಯಕ ಪಾಫ್ ಡುಪ್ಲೆಸಿ (23) ಮೊದಲ ವಿಕೆಟ್ ನಷ್ಟಕ್ಕೆ 44 ರನ್ ಗಳಿಸಿದರು, ನಂತರ ದಾಳಿಗೆ ಇಳಿದ ಸ್ಪಿನ್ನರ್ ಸುನೀಲ್ ನರೇನಾ ವಿರಾಟ್ ಕೊಹ್ಲಿ ವಿಕೆಟ್ ಕಬಳಿಸಿದರೆ ನಂತರ ಬಂದ ಮಿಸ್ಟರಿ ಸ್ಪಿನ್ನರ್ ವರುಣ್ ಚಕ್ರವರ್ತಿ ನಾಯಕನ ವಿಕೆಟ್ ಪಡೆದರು.
ಆರ್ ಸಿಬಿ ಪರವಾಗಿ ಮದ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಗಳಾದ ಬ್ರೇಸ್ವೆಲ್ (19), ಮ್ಯಾಕ್ಸವೆಲ್ (5), ಹಷ೯ಲ್ ಪಟೇಲ್ (0) , ಶಹಬಾದ್ ಅಹ್ಮದ್ (1), ವಿಕೆಟ್ ಕೀಪರ್ ಬ್ಯಾಟ್ಸ್ಮನ್ ದಿನೇಶ್ ಕಾರ್ತಿಕ್ (9) ಹಾಗೂ ಅನೂಜ್ ರಾವತ್ (1) ಪೆವಿಲಿಯನ್ ಪರೇಡ್ ನಡೆಸಿದರು.
ಕೊಲ್ಕತ್ತಾ ನೈಟ್ ರೈಡರ್ಸ್ ಪರವಾಗಿ ಸ್ಪಿನ್ನರ್ ವರುಣ್ ಚಕ್ರವರ್ತಿ 4 ವಿಕೆಟ್, ಪದಾರ್ಪಣೆ ಪಂದ್ಯವಾಡಿದ ಸುಯಾಶ್ ಶಮಾ೯ 3 ವಿಕೆಟ್, ಸುನೀಲ್ ನರೇನಾ 2 ವಿಕೆಟ್ ಹಾಗೂ ಶಾದು೯ಲ್ ಠಾಕೂರ್ 1 ವಿಕೆಟ್ ಪಡೆದರು. ಆಲ್ ರೌಂಡರ್ ಪ್ರದರ್ಶನ ನೀಡಿದ ಶಾರ್ದುಲ್ ಠಾಕೂರ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.