ನಾಡಿನೆಲ್ಲಡೆ ಬೆಳಕಿನ ಹಬ್ಬ ದೀಪಾವಳಿಯನ್ನು ವಿಜೃಂಭಣೆಯಿಂದ ಆಚರಿಸಲು ಸಜ್ಜಾಗಿದೆ. ಈ ಹಿನ್ನೆಲೆ ನಗರದ ನ್ಯಾಷನಲ್ ಪ್ರೈಡ್ ಶಾಲೆಯಲ್ಲಿ ಇಂದೇ ಬೆಳಕಿನ ಹಬ್ಬವನ್ನು ಅದ್ಧೂರಿಯಾಗಿ ಆಚರಣೆ ಮಾಡಲಾಯಿತು.
ಶಾಲೆ ಆವರಣದಲ್ಲಿ ವಿವಿಧ ಬಗೆಯ ರಂಗು ರಂಗಿನ ರಂಗೋಲಿಗಳನ್ನು ಹಾಕಿ, ಹೊಳೆಯುವ ದೀಪಗಳನ್ನು ಹಚ್ಚಿ ಪರಿಸರ ಸ್ನೇಹಿ ದೀಪಾವಳಿಯನ್ನು ಆಚರಣೆ ಮಾಡಿ ಆನಂದಿಸಿದರು.
ಪರಿಸರ ಸ್ನೇಹಿ ದೀಪಾವಳಿಯನ್ನು ಆಚರಣೆ ಮಾಡುವುದರ ಮೂಲಕ ಪಟಾಕಿ ಮುಕ್ತ ದೀಪಾವಳಿಯನ್ನು ಆಚರಿಸುವಂತೆ ಎಲ್ಲರಿಗೂ ಉತ್ತೇಜಿಸಲಾಯಿತು.
ಈ ವೇಳೆ ಶಾಲೆ ಕಾರ್ಯದರ್ಶಿ ಸತೀಶ್ ರಾಜ್, ಪ್ರಾಂಶುಪಾಲರಾದ ರಶ್ಮಿ ಸತೀಶ್ ರಾಜ್, ಆಡಳಿತ ಅಧಿಕಾರಿ ಬಿಂದು, ಕೋ ಆರ್ಡಿನೇಟರ್ ಕುಲ್ಸುಮ್ ಮತ್ತು ನಮಿತಾ ಸೇರಿದಂತೆ ಶಾಲಾ ಶಿಕ್ಷಕರು, ಸಿಬ್ಬಂದಿ ಉಪಸ್ಥಿತರಿದ್ದರು.