ನೆಲ್ಲಕುಂಟೆ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ: ಜನರಲ್ಲಿ ಆತಂಕ

ಸಿಲಿಕಾನ್ ಸಿಟಿ ಬೆಂಗಳೂರಿನ ಹೊರವಲಯದಲ್ಲಿ ಚಿರತೆ ಪ್ರತ್ಯೇಕ್ಷಗೊಂಡು ಎಲ್ಲರಲ್ಲೂ ಆತಂಕ ಮೂಡಿಸಿದೆ.

ಬೆಂಗಳೂರಿನ ಯಲಹಂಕ ತಾಲೂಕು ನೆಲ್ಲಕುಂಟೆ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷದಿಂದ ಇಲ್ಲಿನ ನಿವಾಸಿಗಳಲ್ಲಿ ಆತಂಕ ಮನೆ ಮಾಡಿದೆ.

ಕಳೆದ ಐದು ದಿನಗಳ ಒಳಗೆ ಎರಡು ಭಾರಿ ಚಿರತೆ ಪ್ರತ್ಯೇಕ್ಷಗೊಂಡಿದೆ. ನಾವು ಹೊರಗಡೆ ಬರಲು ಸಹ ಭಯ ಆಗುತ್ತದೆ. ಅರಣ್ಯ ಹಾಗೂ ಪೊಲೀಸ್ ಅಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಆದರೂ ಏನು ಉಪಯೋಗವಾಗಿಲ್ಲ ಎಂದು‌‌ ಸ್ಥಳೀಯರು ಹೇಳಿದ್ದಾರೆ.

ಗ್ರಾಮದ ಪಕ್ಕದಲ್ಲೇ ಕೆರೆ ಇದೆ. ನೀರು‌ ಕುಡಿಯಲು ಬಂದಿರಬಹುದು. ಕಳೆದ ವರ್ಷ ಕೂಡ ಚಿರತೆ ಕಾಣಿಸಿಕೊಂಡಿತ್ತು. ಈಗ ಮತ್ತೆ ಚಿರತೆ ಕಾಣಿಸಿಕೊಂಡು ಆತಂಕ ಮೂಡಿಸಿದೆ ಎಂದು ನೆಲ್ಲಕುಂಟೆ ಗ್ರಾಮದ ನಿವಾಸಿ ಬಿಜು‌ ಮಾಹಿತಿ ನೀಡಿದ್ದಾರೆ.

Leave a Reply

Your email address will not be published. Required fields are marked *