ಅಕ್ಕಮಹಾದೇವಿ ಜಯಂತಿ ಹಿನ್ನೆಲೆ ನಗರದ ದೇಶದಪೇಟೆ ವೀರಶೈವ ಮಹಿಳಾ ಮಂಡಳಿ ಅಕ್ಕನ ಬಳಗ ವತಿಯಿಂದ ಅಕ್ಕಮಹಾದೇವಿ ಜಯಂತಿಯನ್ನು ಬಸವಣ್ಣನ ದೇವಸ್ಥಾನದಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು.
ಅಕ್ಕಮಹಾದೇವಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಗೌರವ ಸಲ್ಲಿಸಿದ ಅಕ್ಕಮಹಾದೇವಿ ಅನುಯಾಯಿಗಳು.
ಈ ವೇಳೆ ಮಾತನಾಡಿದ ಮುಖಂಡರು, ಅಕ್ಕಮಹಾದೇವಿ ವಚನಗಳು ಸರ್ವಕಾಲಿಕ ಸತ್ಯ. ಅಕ್ಕನ ವಚನಗಳನ್ನು ವಿಶ್ಲೇಷಿಸುತ್ತಾ ಹೋದಂತೆಲ್ಲಾ ನಮ್ಮ ಲೌಕಿಕ ಜೀವನ ಹಸನಾಗುವುದು. ಇಂದಿಗೂ ಸ್ತ್ರೀ ಕುಲಕ್ಕೆ ಮಾದರಿಯಾಗುವಂತಹ ವ್ಯಕ್ತಿತ್ವ ಹೊಂದಿದ ಆದ್ಯ ವಚನಗಾರ್ತಿ ಅಕ್ಕಮಹಾದೇವಿ ಎಂದರು.