ತಾಲೂಕಿನ ಜೆಡಿಎಸ್ ಮುಖಂಡ ಹರೀಶ್ ಗೌಡರು ಮೈತ್ರಿ ಧರ್ಮದ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ಈ ಮೂಲಕ ಕಾರ್ಯಕರ್ತರಲ್ಲಿ ಗೊಂದಲ ಮುಡಿಸುವ ಕೆಲಸ ಮಾಡುತ್ತಿದ್ದಾರೆ. ಈ ಬಗ್ಗೆ ಹೈಕಮಾಂಡ್‌ಗೆ ದೂರು ನೀಡುತ್ತಿದ್ದೇವೆ. ಜೊತೆಗೆ ದೊಡ್ಡಬಳ್ಳಪುರದ ಜನತೆಗೆ ಹರೀಶ್ ಗೌಡರ ಕೊಡುಗೆ ಏನಿದೆ ಎಂದು ಜೆಡಿಎಸ್ ಮುಖಂಡ ವಸಂತ್ ಆಕ್ರೋಶ ಹೊರಹಾಕಿದರು.
ದೊಡ್ಡತೂಮಕೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡತುಮಕೂರು ವಿಎಎಸ್‌ಎಸ್‌ಎನ್ ಚುನಾವಣೆ ಕುರಿತು ನಡೆದ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಅಕ್ಟೋಬರ್ 26ರಂದು ನಡೆದ ವಿಎಎಸ್‌ಎಸ್‌ಎನ್ ಚುನಾವಣೆಯಲ್ಲಿ ಮೈತ್ರಿ ಧರ್ಮಪಾಲನೆ ಮಾಡಬೇಕೆಂದು ಜೆಡಿಎಸ್‌ನ ಹೈಕಮಾಂಡ್ ಸ್ಥಳೀಯ ನಾಯಕರಿಗೆ ಸೂಚಿಸಲಾಗಿತ್ತು. ಅದರಂತೆ ನಾವು ವಿಎಸ್‌ಎಸ್‌ಎಸ್ ಚುನಾವಣೆ ಎದುರಿಸಿದೆವು. ಚುನಾವಣೆ ಸಮಯದಲ್ಲಿ ಜೆಡಿಎಸ್ ನಲ್ಲಿ ಎರಡು ಬಣವಾಗುತ್ತದೆ. ಒಂದು ಕಾಂಗ್ರೆಸ್ ಮತ್ತು ಇನ್ನೊಂದು ಬಿಜೆಪಿ ಪಕ್ಷಕ್ಕೆ ಸಹಕಾರ ನೀಡುತ್ತದೆ. ಈ ವೇಳೆ ತಾಲೂಕಿನ ಜೆಡಿಎಸ್ ಮುಖಂಡ ಹರೀಶ್ ಗೌಡ ಮಾತನಾಡಿ, ಜೆಡಿಎಸ್ ಕಾಂಗ್ರೆಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿದೆ ಎಂದು ಹೇಳಿಕೆ ನೀಡಿದ್ದಾರೆ. ಈ ಮೂಲಕ ಹೈಕಮಾಂಡ್ ಸೂಚನೆಯನ್ನ ಪಾಲನೆ ಮಾಡದೇ ಇರುವುದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ಹೇಳಿದರು.
ನಮ್ಮ ದೊಡ್ಡಬಳ್ಳಾಪುರಕ್ಕೆ ನಿಮ್ಮ ಕೊಡುಗೆ ಏನು….?
ಕಾರ್ಯಕರ್ತರಿಗೆ ತಪ್ಪು ಸಂದೇಶ ನೀಡಿ ಭಿನ್ನಾಭಿಪ್ರಾಯ ಮೂಡಿಸಿ ಗೊಂದಲ ಮಾಡುತ್ತಿದ್ದೀರಾ, ನಗರಸಭೆ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ಸಮಯದಲ್ಲಿ ಬೆಳಗ್ಗೆ ಬೇರೆ ಸಭೆಯಲ್ಲಿ ಇರ್ತಿರಾ ಮತ್ತೆ ಸಂಜೆ ಬಂದು ಎನ್‌ಡಿಎಗೆ ಜೈಕಾರ ಕೂಗುತ್ತಿದ್ದೀರಾ.. ನಿಮ್ಮ ರಾಜಕಾರಣ ನಡೆ ನಮಗೆ ಅರ್ಥವಾಗುತ್ತಿಲ್ಲ. ನೀವು ಡಬಲ್ ಸ್ಯಾಂಡ್ ರಾಜಕಾರಣಿಯಾಗುತ್ತಿದ್ದೀರ. ನಿಮ್ಮ ಮನಸ್ಸಿನಲ್ಲಿ ಏನಿದೆ..? ದೊಡ್ಡಬಳ್ಳಾಪುರಕ್ಕೆ ನಿಮ್ಮ ಕೊಡುಗೆ ಏನು…? ದೇವಸ್ಥಾನಗಳಿಗೆ ಕಲ್ಲು ಕೊಟ್ಟಿದ್ದೀರಾ..? ನೀರು ಕೊಟ್ಟಿದ್ದೀರಾ…? ಯಾವುದಾದರು ಊರಿನಲ್ಲಿ ಬೋರ್ ಹಾಕಿಸಿದ್ದೀರಾ..? ನಿಮ್ಮ ಕೊಡುಗೆ ಏನು ಎಂದು ಪ್ರಶ್ನೆ ಮಾಡಿದರು.
ಕನಿಷ್ಠ ಗ್ರಾಮಪಂಚಾಯಿತಿ ಜನ ಪ್ರತಿನಿಧಿಯಾಗಿ ಆದರೂ ಆಯ್ಕೆಯಾಗಿದ್ದೀರಾ…? ನಿಮಗೆ ನೀವೇ ನಾಯಕರು ಎಂದು ಘೋಷಿಸಿಕೊಂಡು ನಮ್ಮನ್ನೆಲ್ಲಾ ಗೊಂದಲಕ್ಕೆ ಸಿಲುಕಿಸುತ್ತಿದ್ದೀರಾ… ನಿಮ್ಮ ಬಗ್ಗೆ ಹೈಕಮಾಂಡ್‌ಗೆ ಪತ್ರದ ಮೂಲಕ ದೂರು ನೀಡುತ್ತವೆ ಎಂದು ಜೆಡಿಎಸ್ ಮುಖಂಡ ಹರೀಶ್ ಗೌಡ ವಿರುದ್ಧ ಹರಿಹಾಯ್ದರು.
ನಂತರ ದೊಡ್ಡತೂಮಕೂರು ಗ್ರಾ.ಪಂ ಮಾಜಿ ಅಧ್ಯಕ್ಷ ಮಂಜುನಾಥ್ ಮಾತನಾಡಿ, ವಿಎಎಸ್‌ಎಸ್‌ಎನ್ ಚುನಾವಣೆ ನಡೆಯದೆ ಅವಿರೋಧವಾಗಿ ಆಯ್ಕೆಯಾಗಬೇಕಿತ್ತು. ಆದರೆ, ಚುಂಚೇಗೌಡ, ಹರೀಶ್ ಗೌಡರಿಂದ ಚುನಾವಣೆ ನಡೆಯುವ ಹಂತಕ್ಕೆ ಹೋಗಿ ನಮ್ಮಲ್ಲೆ ಹೊಡೆದು ಆಳುವ ನೀತಿಯನ್ನು ತಂದಿದ್ದಾರೆ. ಆದರೆ, ಮಾಧ್ಯಮಕ್ಕೆ ವಿಷಯವನ್ನು ತಿರುಚಿ ಹೇಳಿ ಬಿಜೆಪಿ ಪಕ್ಷದ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ನಾವು ಚುನಾವಣೆ ಆಸಕ್ತಿ ವಹಿಸರಿಲಿಲ್ಲ. 4 ಸ್ಥಾನಕ್ಕೆ ಹೊಂದಾಣಿಕೆ ಮಾಡಿಕೊಂಡು ತಟಸ್ಥವಾಗಿರುವುದಕ್ಕೆ ನಮ್ಮ ನಿಲುವು ಇತ್ತು. ಈ ಚುನಾವಣೆ ಹೊಂದಾಣಿಕೆ ಬಗ್ಗೆ ಶಾಸಕರ ಗಮನಕ್ಕೆ ಹೋಗಿರಲಿಲ್ಲ. ಸ್ಥಳೀಯವಾಗಿ ನೀವೆ ಹೊಂದಾಣಿಕೆ ಮಾಡಿಕೊಂಡು ಸೊಸೈಟಿ ಅಭಿವೃದ್ದಿ ಮಾಡಿ ಎಂದು ಭರವಸೆ ನೀಡಿದ್ದರು. ಆದರೆ, ಕೊನೆಯಲ್ಲಿ ಚುನಾವಣೆ ಪ್ರಕ್ರಿಯೆಗೆ ಶುರು ಮಾಡಿದ್ದೇ ಕಾಂಗ್ರೆಸ್ ನವರು. ಆ ಸಮಯದಲ್ಲೂ ನಾವು ಹೊಂದಾಣಿಕೆ ಬಗ್ಗೆ ಮಾತಾಡಿದ್ವಿ ಆದರೆ, ಅದಕ್ಕೆ ಸಹಕರಿಸಲಿಲ್ಲ. ಚುಂಚೇಗೌಡರಿಗೆ ಸಹಕಾರ ಸಂಘಗಳನ್ನ ತಮಗೆ ಯಾವ ರೀತಿ ಬೇಕೋ ಆ ರೀತಿ ನಡೆಸಿಕೊಂಡು ಹೋಗುವುದು ಅವರ ರಕ್ತಗತದಲ್ಲೆ ಬಂದಿದೆ. ಸಹಕಾರ ಸಂಘಗಳು ಅವರ ಹಂಗಿನಲ್ಲೆ ಇರಬೇಕು. ಅದಕ್ಕೆ ಏನು ಬೇಕೋ ಅದನ್ನ ಮಾಡುತ್ತಾರೆ. ಎಲ್ಲಾ ಪಕ್ಷಗಳನ್ನು ರೌಂಡ್ ಹಾಕಿಕೊಂಡು ಬಂದಿದ್ದಾರೆ. ಶಾಸಕರು ಚುನಾವಣೆ ಸಂಬಂಧಪಟ್ಟಂತೆ ಪ್ರತಿಭಟನೆ ನಡೆಸಿ ನ್ಯಾಯ ಕೇಳಿದ್ದಾರೆ ಅಷ್ಟೇ. ಈ ಬಗ್ಗೆ ಚುಂಚೇಗೌಡರು ಹಾಗೂ ಹರೀಶ್ ಗೌಡರು ಶಾಸಕರ ವಿರುದ್ಧ ಇಲ್ಲಸಲ್ಲದ ಅರೋಪ ಹೊರೆಸಿ ಅಪ್ರಚಾರ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶಾಸಕರ ವಿರುದ್ಧ ಹರೀಶ್ ಗೌಡ ನಾಲಿಗೆ ಹರಿಬಿಟ್ಟಿರುವ ವಿಚಾರಕ್ಕೆ ಪ್ರತಿಕ್ರಿಯಿಸುತ್ತಾ… ನಿಮಗೆ ಕಾಂಗ್ರೆಸ್ ಪಕ್ಷಕ್ಕೆ ಹೋಗಬೇಕೆನಿಸಿದರೆ ಹೋಗಿಬಿಡಿ. ಸುಖಾ ಸುಮ್ಮನೇ ಹಾಗೇ ಮಾಡ್ತೀನಿ ಹೀಗೆ ಮಾಡ್ತೀನಿ ಮಧುರೆ ಹೋಬಳಿಗೆ ಬನ್ನಿ ಎಂದು ಕರೆಯುವುದು ತಪ್ಪು. ಮಧುರೆ ಹೋಬಳಿಯಲ್ಲಿ ಬಿಜೆಪಿ ಪಕ್ಷಕ್ಕೆ ತನ್ನದೇ ಆದ ಕಾರ್ಯಕರ್ತರ ಗುಂಪು ಹಾಗೂ ಪಕ್ಷದ ಸಂಘಟನೆ ಸದೃಢವಾಗಿದೆ. ನಿನ್ನೆ ಮೊನ್ನೆ ಬಂದು ಸಂಘಟನೆಯನ್ನು ಉಲ್ಟಾಪಲ್ಟಾ ಮಾಡುತ್ತೀನಿ ಎಂದರೆ ಅದು ಸಾಧ್ಯವೇ ಇಲ್ಲ. ಅವರ ಸ್ವಂತ ಊರಿನಲ್ಲೆ ಇರುವ ಜೆಡಿಎಸ್ ಗ್ರಾ.ಪಂ ಸದಸ್ಯರನ್ನು ಹಿಡಿದಿಟ್ಟುಕೊಳ್ಳುವ ಶಕ್ತಿ ನಿಮಗೆ ಇಲ್ಲ. ಇನ್ನ ನಿಮ್ಮ ಸಂಘಟನೆ ಎಷ್ಟರ ಮಟ್ಟಿಗೆ ಇದೆ ಎಂದು ತಿಳಿದುಕೊಳ್ಳಿ. ಬಾಯಿಯಿಂದ ಹೊಲಸು ಮಾತುಗಳನ್ನು ತೆಗೆದು ಹಾಕಿ ಅದನ್ನು ಶುದ್ದೀಕರಣ ಮಾಡಿಕೊಳ್ಳಿ ನೇರವಾಗಿ ಬಂದು ಶಾಸಕರಲ್ಲಿ ಕ್ಷಮೆ ಕೇಳಿ. ಇನ್ನೊಂದು ಬಾರಿ ಶಾಸಕರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದರೆ, ನೀವು ಎಲ್ಲಿ ಹೋದರಲ್ಲಿ ಅಲ್ಲಿಗೆ ಬಂದು ನಾವು ಪ್ರತಿಭಟನೆ ನಡೆಸಿ ನಿಮ್ಮ ಮುಖಕ್ಕೆ ಕಪ್ಪು ಮಸಿ ಬಳಿಯುತ್ತೇವೆ ಎಂದು ಎಚ್ಚರಿಸಿದರು.
ದೊಡ್ಡತುಮಕೂರು ಗ್ರಾ.ಪಂ ಮಾಜಿ ಉಪಾಧ್ಯಕ್ಷ ಮಂಜುನಾಥ್ ಮಾತನಾಡಿ, ಚುನಾವಣೆ ನಡೆಸುವ ಉದ್ದೇಶದಿಂದ ಕೋರ್ಟ್ ಮೇಟ್ಟಿಲು ಏರಿರುವುದು ಮೊದಲು ಕಾಂಗ್ರೆಸ್ ನವರು ಆಮೇಲೆ ನಾವು ಚುನಾವಣೆಗೆ ಹೋಗಬಾರದೆಂದು ಕೋರ್ಟ್ ಆದೇಶ ತಂದಿದ್ದಾರೆ. ನ್ಯಾಯಯುತವಾಗಿ ಚುನಾವಣೆ ನಡೆಸಿ ವಿಎಸೆಸೆನ್ ಅಭಿವೃದ್ಧಿ ಮಾಡುವ ಉದ್ದಶವಿದ್ದರೇ, ನಿಮಗೆ ನಾವೇ ಗೌರವದಿಂದ ನಡೆದುಕೊಳ್ಳುತ್ತಿದೆವು ಎಂದು ಚುಂಚೇಗೌಡರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನಾವು ಅಂದು ಪ್ರತಿಭಟನೆ ಮಾಡಿದ್ದು ಮತ ಏಣಿಕೆ ನಡೆಸಬೇಕೆಂದು ಆದರೆ ಅದನ್ನು ಅಪಪ್ರಚಾರ ಮಾಡುತ್ತಿದೀರಿ ನಾವು ತಪ್ಪು ನಡೆದಿದ್ದರೇ ಕ್ಷಮೆ ಕೇಳುತ್ತಿದ್ದೆವೆ ನಿಮ್ಮಿಂದ ತಪ್ಪು ನಡೆದಿದ್ದರೆ ಕ್ಷಮೆ ಕೇಳುವುದು ಬೇಡ ಆದರೆ ಇನ್ನು ಮುಂದೆ ಆದರೂ ಬೇರೆ ಸೊಸೈಟಿಗಳಲ್ಲಿ ಈ ಬಾಳು ಬಾಳಬೇಡಿ, ಸರಕಾರ ಅವರದ್ದು ಇದೇ ಎಂದು ಚುನಾವಣೆ ಪ್ರಕ್ರಿಯೆ ಅವರದ್ದೇ ಆದ ಆಟ ನಡೆಯುತ್ತಿತ್ತು ಬಗ್ಗೆ ಶಾಸಕರ ಗಮನಕ್ಕೆ ತಂದಿದ್ದೆವು ಆದ್ದರಿಂದ ಸ್ಥಳಕ್ಕೆ ಬಂದು ನ್ಯಾಯ ಕೇಳಿದ್ದು ಇದನ್ನೇ ತಿರುಚಿ ಜನರಿಗೆ ಶಾಸಕರ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ.
ಶಾಸಕರು ಚಿಲ್ಲರೇ(ಪುಡಿಗಾಸು) ಕಾಸು ಇಟ್ಟುಕೊಂಡು ರಾಜಕಾರಣ ಮಾಡುತ್ತಿದ್ದಾರೆ ಎಂದು ಹರೀಶ್ ಗೌಡ ಹೇಳಿಕೆ ವಿಚಾರ…. ಶಾಸಕರ ಹತ್ತಿರ ಪುಡಿಗಾಸು ಇದೆ. ಅದರಲ್ಲೇ ಸಾಧ್ಯವಾದಷ್ಟು ತಾಲೂಕಿನ ಜನತೆಗೆ ಸೇವೆ ಮಾಡುತ್ತಿದ್ದಾರೆ. ನೀವು ಬಂದ ನೋಟು ಇಟ್ಟಿಕೊಂಡು ಇರುವುವರು ಏನು ಮಾಡಿದ್ದೀರಾ…? ಯಾವ ಸೇವೆ ಮಾಡುತ್ತಿದ್ದೀರಾ…? ಪುಡಿಗಾಸಿನಿಂದ 22 ಪಂಚಾಯಿತಿಗಳಲ್ಲಿ 13 ಪಂಚಾಯಿತಿಗಳು, ನಗರ ಸಭೆಯನ್ನು ಬಿಜೆಪಿ ಪಕ್ಷದ ತೆಕ್ಕೆಗೆ ತೆಗೆದುಕೊಂಡಿದ್ದಾರೆ. ಬಂದ ನೋಟು ಇಟ್ಟುಕೊಂಡಿರುವ ನೀವು ಏನು ಮಾಡಿದ್ದೀರಾ…? ನಿಮ್ಮ ಊರಲ್ಲೇ ಜೆಡಿಎಸ್ ಪಕ್ಷದ ಸದಸ್ಯರನ್ನು ಹಿಡಿದಿಟ್ಟುಕೊಳ್ಳಲು ಸಾಧ್ಯವಾಗಿಲ್ಲ. ಮತ್ತೆ ನೀವು ಯಾಕೆ ಗ್ರಾಮ ಪಂಚಾಯತಿ ಚುನಾವಣೆಗೆ ಸ್ಪರ್ಧೆ ಮಾಡಿಲ್ಲ. ಎಂ.ಎಲ್.ಎ ಚುನಾವಣೆಗೆ ಬನ್ನಿ. ಯಾರನ್ನೋ ಮನವೊಲಿಸಲು ಬಕೆಟ್ ರಾಜಕಾರಣ ಬಿಡಿ ಎಂದು ಹರೀಶ್ ಗೌಡರ ವಿರುದ್ಧ ಆಕ್ರೋಶ ಹೊರಹಾಕಿದರು.
ಈ ವೇಳೆ ದೊಡ್ಡತುಮಕೂರು ಗ್ರಾಮದ ಮುಖಂಡರಾದ ಪ್ರಕಾಶ್, ಮಂಜುನಾಥ್, ನಾಗರಾಜು, ರಾಜು ಸೇರಿದಂತೆ ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.